ವನ ನಿರ್ಮಾಣಕ್ಕೆ ಸಹಕರಿಸಿ

07SPT3
Published on

ಸೋಮವಾರಪೇಟೆ: ಜೈ ಜವಾನ್ ಮಾಜಿ ಸೈನಿಕರ ಸಂಘದ 12ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಪತ್ರಿಕಾ ಭವನದ ಸಭಾಂಗಣದಲ್ಲಿ ಶನಿವಾರ ನಡೆಯಿತು.


ಸಭೆಯಲ್ಲಿ ಸಂಘದ ನೂತನ ಭವನ ನಿರ್ಮಾಣ ಮಾಡಲು ಈಗಾಗಲೇ ಚಾಲನೆ ನೀಡಲಾಗಿದ್ದು, ಸದಸ್ಯರು ಹೆಚ್ಚಿನ ಧನಸಹಾಯ ಮಾಡಬೇಕೆಂದು ಅಧ್ಯಕ್ಷ ಈರಪ್ಪ ಮನವಿ ಮಾಡಿದರು. ಸಂಘದ ಸಂತೋಷ ಕೂಟವನ್ನು ಸದ್ಯದಲ್ಲಿಯೇ ನಡೆಸಲಿದ್ದು, ಎಲ್ಲರೂ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಚಟುವಟಿಕೆಗಳನ್ನು ನಡೆಸಲು ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಬೇಕೆಂದರು.


ಎರಡು ವರ್ಷದ ಹಿಂದೆ ಪ್ರಾರಂಭವಾದ ರಾಜ್ಯ ಮಟ್ಟದ ಮಾಜಿ ಸೈನಿಕರ ಒಕ್ಕೂಟದಲ್ಲಿ ಸೇರಲು ಹೆಚ್ಚಿನ ಸದಸ್ಯರು ತಮ್ಮ ಅಸಸಮಾಧನ ವ್ಯಕ್ತಪಡಿಸಿದರು. ಈಗಾಗಲೇ ಜಿಲ್ಲಾ ಸಮಿತಿಗೆ 20 ವರ್ಷ ಹಾಗು ತಾಲೂಕು ಸಂಘಕ್ಕೆ 11 ವರ್ಷಗಳು ಸಂದಿದ್ದು, ಎಲ್ಲ ವ್ಯವಸ್ಥೆಗಳನ್ನು ಇಲ್ಲಿಯೇ ಆಗುತ್ತಿರುವುದರಿಂದ ಮತ್ತೊಂದು ಸಂಘಕ್ಕೆ ಸೇರುವ ಅವಶ್ಯಕತೆ ಇಲ್ಲ ಎಂದು ಸದಸ್ಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.


ಇದೇ ಸಂದರ್ಭ ತೆರವುಗೊಂಡಿದ್ದ ಸಂಘದ ಖಜಾಂಚಿ ಸ್ಥಾನಕ್ಕೆ ಎನ್.ಜಿ. ಕೆಂಪಯ್ಯ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಎಸ್.ಎಂ. ಸುಬ್ರಹ್ಮಣ್ಯ, ಕಾರ್ಯದರ್ಶಿ ಆರ್.ಜಿ. ಬಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net