

ಮೂಡಿಗೆರೆ: ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರು ಪಾವತಿ ಮಾಡಿದಲ್ಲಿ ಸಹಕಾರ ಸಂಘ ಹೆಚ್ಚಿನ ಲಾಭಗಳಿಸುವ ಜತೆಗೆ ಇತರರಿಗೆ ಸಾಲ ನೀಡಲು ಹಾಗೂ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಆದಿಶಕ್ತಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಕಮಲಾಕ್ಷಿ ಹೇಳಿದರು.
ಬುಧವಾರ ಪಟ್ಟಣದ ಜೇಸಿ ಭವನದಲ್ಲಿ ನಡೆದ ಆದಿಶಕ್ತಿ ಮಹಿಳಾ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಆದಿಶಕ್ತಿ ಮಹಿಳಾ ಪತ್ತಿನ ಸಹಕಾರ ಸಂಘ 620 ಮಂದಿ ಸದಸ್ಯರನ್ನು ಹೊಂದಿದೆ. ಸಂಘದಲ್ಲಿ ಪ್ರತಿ ಸದಸ್ಯರಿಗೆ 2 ಸಾವಿರ ರೂ. ಠೇವಣಿ ನಿಗದಿಪಡಿಸಲಾಗಿದೆ. ಅದನ್ನು ಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಮಹಿಳೆಯರ ಪತ್ತಿನ ಸಹಕಾರ ಸಂಘ 10 ವರ್ಷದಲ್ಲಿ ದೊಡ್ಡ ಸಾಧನೆ ಮಾಡಿದೆ. ಸದಸ್ಯರು ಇನ್ನೂ ಹೆಚ್ಚಿನ ಸಹಕಾರ ನೀಡಿದಲ್ಲಿ ಸಂಘ ಹೆಚ್ಚಿನ ಬಂಡವಾಳ ಹೊಂದಿ ಮಹಿಳಾ ಸಂಘಕ್ಕೆ ಹೆಚ್ಚಿನ ಶಕ್ತಿ ಬರಲಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಎಚ್.ಟಿ.ನಾಗರತ್ನಮ್ಮ, ಸದಸ್ಯರಾದ ಎಚ್.ಟಿ.ಭಾನುಮತಿ, ಮಹಾಲಕ್ಷ್ಮೀ ಎಚ್.ಆರ್.ಗೀತಾ, ಬಿ.ಭಾರತಿ, ಎಚ್.ಪಿ.ಸರಸ್ವತಿ, ಕೆ.ಪಿ.ದೇವಕಿ, ಬಿ.ಕೆ.ಜಯಮ್ಮ, ಎನ್.ಆರ್.ಬಿಂದು, ಕಲ್ಯಾಣಿ, ಬಿ.ಎಲ್.ದುಶ್ಯಂತಲಾ ಇತರರಿದ್ದರು.