ಗುತ್ತಿಗೆ ಬಿಲ್​ ಪಾವತಿ ವಿಷಯ, ಠಾಣೆಯಲ್ಲಿ ಕೌಂಟರ್​ ಪ್ರಕರಣ ದಾಖಲು

IMG-20240809-WA0002
Published on

ವಿಜಯವಾಣಿ ಸುದ್ದಿಜಾಲ ಗದಗ
ಗುತ್ತಿಗೆ ಹಣ ಬಾಕಿ ವಿಷಯವಾಗಿ ಗದಗ ನಗರಸಭೆ ಇಂಜೀನಿಯರ್​ ಎಚ್​.ಬಂಡಿವಡ್ಡರ ಮತ್ತು ಗುತ್ತಿಗೆದಾರರ ತಂದೆ ಪ್ರಕಾಶ ಕಲ್ಮನಿ ಎಂಬುವರ ನಡುವೆ ವಾಕ್​ ಸಮರ, ಕೈ ಕೈ ಮೀಲಾಯಿಸಿರುವ ಟನೆ ಜರುಗಿದ್ದು, ನಗರದ ಬಡಾವಣೆ ಪೊಲಿಸ್​ ಠಾಣೆಯಲ್ಲಿ ಕೌಂಟರ್​ ದೂರು ದಾಖಲಿಸಲಾಗಿದೆ. ಮೂಲಗಳ ಪ್ರಕಾರ 2009ರಲ್ಲಿ ನಡೆದ ಶೌಚಾಲಯ ಕಾಮಗಾರಿ ಬಿಲ್​ ವಿಷಯವಾಗಿ ಚಚಿರ್ಸಲು ಪ್ರಕಾಶ ಕಲ್ಮನಿ(ಗುತ್ತಿಗೆದಾರನ ತಂದೆ) ಎಂಬುವರು ಮಂಗಳವಾರ ನಗರಸಭೆಗೆ ತೆರಳಿದ್ದಾರೆ. ಇಂಜೀನಿಯರ್​ ಮತ್ತು ಪ್ರಕಾಶ ಕಲ್ಮನಿ ನಡುವೆ ವೈಮನಸ್ಸು ಬೆಳೆದು ಮಾತಿಗೆ ಮಾತು ಬೆಳೆದಿದೆ. ಕೊನೆಯದಾಗಿ ಕೈಕೈ ಮೀಲಾಯಿಸಿದ್ದಾರೆ ಎನ್ನಲಾಗಿದೆ. ವಿಷಯ ಗಂಭೀರ ಸ್ವರೂಪ ಪಡೆದ ಹಿನ್ನೆಲೆ ನಗರಸಭೆ ಸಿಬ್ಬಂದಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ವಿಷಯ ತಿಳಿಸಿದ್ದಾರೆ. ಗುತ್ತಿಗೆದಾರರು ಕೂಡ ಜಿಲ್ಲಾಡಳಿತಕ್ಕೆ ತೆರಳಿ ತಮ್ಮ ವಾದ ಮಂಡಿಸಿದ್ದಾರೆ. ವಿಷಯ ಆಲಿಸಿದ ಜಿಲ್ಲಾಧಿಕಾರಿಗಳು ದೂರು ನೀಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಬಂಡಿವಡ್ಡರ ದೂರು: ನಗರದ ಬಡಾವಣೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಇಂಜೀನಿಯರ್​ ಬಂಡಿವಡ್ಡರ ಅವರು, ಪ್ರಕಾಶ ಮತ್ತು ಸುಧಾಕರ್​ ಎಂಬುದು ನಗರಸಭೆ ಆಗಮಿಸಿ ಅಪರಿಚಿತರ ಹೆಸರಿನಲ್ಲಿ ಇರುವ ಕಟ್ಟಡ ಪರವಾಣಿಗೆ, ಖಾತಾಗಳನ್ನು ಅನಧೀಕೃತವಾಗಿ ಮಾಡಿಕೊಡುವಂತೆ ಒತ್ತಡ ಹೇರಿದ್ದಾರೆ. ಸುಳ್ಳು ಆಪಾದನೆ ಮೂಲಕ ಲೋಕಾಯುಕ್ತಕ್ಕೆ ಅಜಿರ್ ಬರೆದು ಬೆದರಿಕೆ ಹಾಕಿದ್ದಾರೆ. ಮತ್ತು ಕಾಮಗಾರಿ ಕಡತ ಇಲ್ಲದಿದ್ದರೂ 15 ವರ್ಷದ ಹಿಂದೆ ಕಾಮಗಾರಿ ಮಾಡಿದ್ದಕ್ಕಾಗಿ ಲಾಂತರ ಹಣ ನಿಡುಇವಂತೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ವಿರೊಧಿಸಿದ್ದಕ್ಕಾಗಿ, ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹೊಡಿ ಬಡಿ ಮಾಡಿದ್ದಾರೆ ಎಂದು ಬಂಡಿವಡ್ಡರ ದೂರು ದಾಖಲಿಸಿದ್ದಾರೆ. ಭಾರತೀಯ ನಿತಿ ಸಂಹಿತೆ 132, 133, 3/5, 352 ಹಾಗೂ 49 ಸೆಕ್ಷನ್​ ಅಡಿ ದೂರು ದಾಖಲಿಸಿದಲಾಗಿದೆ.
ಪ್ರಕಾಶ ದೂರು:
ಇಂಜೀನಿಯರ್​ ಬಂಡಿವಡ್ಡರ ಮೇಲೆ ದೂರು ನೀಡಿರುವ ಪ್ರಕಾಶ ಕಲ್ಮನಿ, 2009ರಲ್ಲಿ ನಡೆದ ಕಾಮಗಾರಿಗೆ ಸಂಬಂಧಿಸಿದಂತೆ ಬಿಲ್​ ಪಾವತಿ ಮಾಡುವಂತೆ ಹಲವು ಬಾರಿ ಮನವಿ ಇಂಜೀನಿಯರ್​ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಬಿಲ್​ ಕೇಳಿದ್ದಕ್ಕೆ ನಮ್ಮನ್ನು ಅಡ್ಡಗಟ್ಟಿ, ಹೊಡಿ ಬಡಿ ಮಾಡಿ, ಒದ್ದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಭಾರತೀಯ ನೀತಿ ಸಂಹಿತೆ 115/2, 126/2, 351/2 ಹಾಗೂ 352 ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net