ಕರಾವಳಿಯಲ್ಲಿ ಮಳೆ ಚುರುಕು

IMG-20210604-WA0013
Published on

ಮಂಗಳೂರು: ಮುಂಗಾರು ಮಾರುತಗಳು ಕರಾವಳಿ ಪ್ರವೇಶಿಸುವ ಮುನ್ನವೇ ಮಳೆ ಚುರುಕುಗೊಂಡಿದೆ. ಗುರುವಾರ ರಾತ್ರಿಯಿಂದಲೇ ದ.ಕ- ಉಡುಪಿ ಜಿಲ್ಲಾದ್ಯಂತ ಮಳೆ ಸುರಿಯಲು ಆರಂಭವಾಗಿದ್ದು, ಶುಕ್ರವಾರವೂ ಮುಂದುವರಿದಿದೆ.
ದಟ್ಟ ಮೋಡ ಕವಿದ ವಾತಾವರಣದೊಂದಿಗೆ ನಿರಂತರವಾಗಿ ವರ್ಷಧಾರೆಯಾಗುತ್ತಿದೆ. ರಾತ್ರಿ ಗುಡುಗು ಮಿಂಚಿನ ಅಬ್ಬರವಿತ್ತು. ಮುಂಗಾರು ಶನಿವಾರ ವೇಳೆಗೆ ಕರಾವಳಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.
ನಿರಂತರ ಮಳೆಯಿಂದಾಗಿ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಮಂಗಳೂರು ನಗರದಲ್ಲಿಎಂದಿನಂತೆ ರಸ್ತೆಯಲ್ಲಿಯೇ ನೀರು ಹರಿದಿದೆ. ಆದರೆ ವಾಹನ ಸಂಚಾರ ಕಡಿಮೆಯಾಗಿರುವುದರಿಂದ ಸಮಸ್ಯೆಯಾಗಿಲ್ಲ. ಕರಾವಳಿಗೆ ಇಂದು ಯೆಲ್ಲೋ ಅಲರ್ಟ್‌ ಇದ್ದು, ಭರ್ಜರಿ ಮಳೆ ನಿರೀಕ್ಷೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net