ನಿರಂತರ ಅಧ್ಯಯನ, ಬರವಣಿಗೆಯಿಂದ ಜ್ಞಾನ ವೃದ್ಧಿ

07Yaragatti-1 copy
ಯರಗಟ್ಟಿ ಪಟ್ಟಣದಲ್ಲಿ ಪ್ರಾಧ್ಯಾಪಕ ಧನವಂತ ಹಾಜವಗೋಳ ತಾಲೂಕು ಘಟಕದ ಚುಟುಕು ಸಾಹಿತ್ಯ ಪರಿಷತ್ ಘಟಕ ಉದ್ಘಾಟಿಸಿದರು. ಸಿ.ಕೆ. ಜೋರಾಪೂರ, ಅಜಿತಕುಮಾರ ದೇಸಾಯಿ, ಬಿ.ಐ. ಚಿನಗುಡಿ, ವೆಂಕನಗೌಡ ಪಾಟೀಲ ಇತರರಿದ್ದರು.
Published on

ಯರಗಟ್ಟಿ: ನವ ಬರಹಗಾರಿಗೆ ಮತ್ತು ಓದುಗರಿಗೆ ಚುಟುಕು ಸಾಹಿತ್ಯ ಪರಿಷತ್ತು ಉತ್ತಮ ವೇದಿಕೆಯಾಗಿದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಧನವಂತ ಹಾಜವಗೋಳ ಹೇಳಿದರು.

ಇಲ್ಲಿನ ಸರ್ಕಾರಿ ಕನ್ನಡ ಶಾಲೆ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಘಟಕದ ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ನಿರಂತರ ಅಧ್ಯಯನ ಮತ್ತು ಬರವಣಿಗೆಯಿಂದ ಜ್ಞಾನ ಹೆಚ್ಚುತ್ತದೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ. ಜೋರಾಪುರ ಮಾತನಾಡಿದರು. ತಾಲೂಕು ಘಟಕದ ಅಧ್ಯಕ್ಷ ವೆಂಕನಗೌಡ ಪಾಟೀಲ ರಚಿತ ಬದುಕು ಬಯಲಾಟ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ, ಸಾಹಿತಿ ಬಿ.ಐ. ಚಿನಗುಡಿ, ಬಸವರಾಜ ಗಾರ್ಗಿ, ಡಾ.ಭಾರತಿ ಮಠದ, ಇಂದಿರಾ ಮೋಟೆಬೆನ್ನೂರ, ಟಿ.ಎಂ. ಕಾಮನ್ನವರ, ಶಿವಾನಂದ ಯರಗಣವಿ, ಡಾ. ಮಲ್ಲಿಕಾರ್ಜುನ ಇಂಚಲ, ಎ.ಎ. ಮಕ್ತುನವರ, ದೇವೇಂದ್ರ ಕಮ್ಮಾರ, ರಾಜೇಂದ್ರ ಶೆಟ್ಟಿ, ಐ.ಎಂ. ಚಾಂದಕನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net