ಪತ್ರಕರ್ತರಿಗೆ ಸತತ ಅಧ್ಯಯನ ಪೂರಕ

24CKD4.jpg
Published on


 ಚಿಕ್ಕೋಡಿ: ನಿರಂತರ ಅಧ್ಯಯನ ಹಾಗೂ ಭಾಷೆ ಮೇಲೆ ಹಿಡಿತವಿದ್ದರೆ ಉತ್ತಮ ಪತ್ರಕರ್ತರಾಗಲು ಸಾಧ್ಯ ಎಂದು ಡಿವೈಎಸ್ಪಿ ಬಸವರಾಜ ಯಲಿಗಾರ  ಹೇಳಿದರು.

ಚಿಕ್ಕೋಡಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಡಿವೈಎಸ್‌ಪಿ ಬಸವರಾಜ ಯಲಿಗಾರ ಮಾತನಾಡಿದರು. ಮಾಧವ ಗಿತ್ತೆ, ಉದಯಸಿಂಗ್ ರಜಪೂತ, ಮಹಾಂತೇಶ ನಿಡವಣೆ ಇತರರಿದ್ದರು.
ಚಿಕ್ಕೋಡಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಡಿವೈಎಸ್‌ಪಿ ಬಸವರಾಜ ಯಲಿಗಾರ ಮಾತನಾಡಿದರು. ಮಾಧವ ಗಿತ್ತೆ, ಉದಯಸಿಂಗ್ ರಜಪೂತ, ಮಹಾಂತೇಶ ನಿಡವಣೆ ಇತರರಿದ್ದರು.

ಪಟ್ಟಣದ ಬಿ.ಕೆ.ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಚಿಕ್ಕೋಡಿಯ ಉನ್ನತಿ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿದ್ದು, ಸತ್ಯನಿಷ್ಠ ವರದಿಗಾರಿಕೆ ಮೈಗೂಡಿಸಿಕೊಳ್ಳಬೇಕು ಎಂದರು.

ಎಸಿ ಮಾಧವ ಗಿತ್ತೆ ಮಾತನಾಡಿ, ಮಾಧ್ಯಮ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತದೆ. ಪ್ರವಾಹ ಪರಿಸ್ಥಿತಿಯ ನೈಜ ಚಿತ್ರಣ ನೀಡಲು ಪತ್ರಕರ್ತರು ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ ಎಂದರು. ಪುರಸಭೆ ಮುಖ್ಯಾಕಾರಿ ಮಹಾಂತೇಶ ನಿಡವಣಿ ಮಾತನಾಡಿ, ಸರ್ಕಾರದ 4ನೇ ಅಂಗವಾಗಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಮಾಧ್ಯಮದ ಪಾತ್ರ ದೊಡ್ಡದು ಎಂದರು.

ಪತ್ರಕರ್ತೆ ಕಲಾವತಿ ಬೈಚಬಾಳ ನುಡಿಚಿತ್ರ ಬರವಣಿಗೆ ತಂತ್ರಗಳು, ಮೃತ್ಯುಂಜಯ ಯಲ್ಲಾಪೂರಮಠ ಪತ್ರಿಕೋದ್ಯಮ ವತ್ತಿ ಸವಾಲುಗಳು ಮತ್ತು ಅವಕಾಶಗಳು, ಲೋಹಿತ ಶಿರೋಳ ಟೆಲಿವಿಷನ್ ಸುದ್ದಿ ರಚನೆ, ಚಂದ್ರಶೇಖರ ಚಿನಕೇಕರ ಡಿಜಟಲ್ ಯುಗದಲ್ಲಿ ಮಾಧ್ಯಮ ಸಾಕ್ಷರತೆ ಕುರಿತು ಉಪನ್ಯಾಸ ನೀಡಿದರು.ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಉದಯಸಿಂಗ್ ರಜಪೂತ ಅಧ್ಯಕ್ಷತೆ ವಹಿಸಿದ್ದರು. ಡಾ.ವಿನಾಯಕ ಮಂಜಲಾಪೂರ, ಪ್ರೊ.ಎಲ್.ಎಸ್. ಪಡತಾರೆ, ಶಿವಮೂರ್ತಿ ಪಡಲಾಳೆ, ಸದಾಶಿವ ಹಾದಿಮನಿ, ವಿಮಲಾ ಚಿನಕೇಕರ, ಲೋಹಿತ ಹಸೂರೆ, ಪೂಜಾ ಬಾನಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net