ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ: ಡಾ.ವೆಂಕಪ್ಪಯ್ಯ ದೇಸಾಯಿ

21 Jaggu 5
ಕೆಎಲ್​ಎಸ್​ ಗೋಗಟೆ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬೆಳಗಾವಿ ಕೆ.ಕೆ. ವೇಣುಗೋಪಾಲ ಆಡಿಟೋರಿಯಂನಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಧಾರವಾಡದ ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ದೇಸಾಯಿ ಮಾತನಾಡಿದರು. ಪಿ.ಎಸ್​. ಸಾವಕಾರ, ಅನಂತ ಮಂಡಗಿ, ಆರ್​.ಎಸ್​. ಮುತಾಲಿಕ್​ ಇತರರಿದ್ದರು.
Published on

ಬೆಳಗಾವಿ: ವಿದ್ಯಾರ್ಥಿಗಳು "ನಿರಂತರ ಅಧ್ಯಯನ, ಕಠಿಣ ಪರಿಶ್ರಮ, ಸದಾ ಕ್ರಿಯಾಶೀಲತೆಯಿಂದಿದ್ದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಧಾರವಾಡದ ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ದೇಸಾಯಿ ಹೇಳಿದರು.

ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕೆಎಲ್​ಎಸ್​ ಗೋಗಟೆ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಲಾ ಸೊಸೈಟಿಯ ಟಿಳಕವಾಡಿಯ ಕೆ.ಕೆ.ವೇಣುಗೋಪಾಲ ಆಡಿಟೋರಿಯಂನಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಕರ್ನಾಟಕ ಕಾನೂನು ಸಂಸ್ಥೆಯ ಚೇರ್ಮನ್​ ಪಿ.ಎಸ್​. ಸಾವಕಾರ ಮಾತನಾಡಿ, ವಿದ್ಯಾರ್ಥಿಗಳು ಮಾಡಿದ ಸಾಧನೆ ಸಂತಸ ತಂದಿದೆ. ನಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಬೇಕಾದ ಸಹಾಯ ಸಹಕಾರ ನೀಡಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅನಂತ ಮಂಡಗಿ ಮಾತನಾಡಿ, ಆತ್ಮವಿಶ್ವಾಸ, ಕಠಿಣ ಪರಿಶ್ರಮ, ಸತತ ಅಧ್ಯಯನದಿಂದ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದರು. ವಿವೇಕ ಕುಲಕರ್ಣಿ, ಎಸ್​.ವಿ.ಗಣಾಚಾರಿ, ಆರ್​.ಎಸ್​. ಮುತಾಲಿಕ, ರಾಜ ಬೆಳಗಾವಕರ, ಪ್ರಶಾಂತ ಕುಲಕರ್ಣಿ, ಉಜ್ವಲಾ ಮಂಡಗಿ, ಎ.ಕೆ.ತಗಾರೆ, ಎ.ಎಸ್​.ಕೇರೂರ ವೇದಿಕೆಯಲ್ಲಿದ್ದರು.

ಗೋಗಟೆ ಪದವಿ ಪೂರ್ವ ಕಾಲೇಜಿನ ಚೇರ್ಮನ್​ ವಿ.ಎಂ. ದೇಶಪಾಂಡೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಪೂರ್ವಿ ರಾಜಪೂರೋಹಿತ, ಅಂತರಾ ಕುಲಕರ್ಣಿ ಪ್ರಾರ್ಥಿಸಿದರು. ಇಂಗ್ಲಿಷ್​ ಪ್ರಾಧ್ಯಾಪಕಿ ಅನಿತಾ ರಾಠೋಡ ಪರಿಚಯಿಸಿದರು. ರ್ಯಾಂಕ್​ ಪಡೆದ ವಿದ್ಯಾರ್ಥಿಗಳಾದ ತನ್ವಿ ಪಾಟೀಲ, ರೂಹಿ ಶಾನಬಾಗ್​ ತಮ್ಮ ಅಭಿಪ್ರಾಯ ಹಂಚಿಕೊಂಡರು. ಲಕ್ಷಿ$್ಮ ದೇಶಪಾಂಡೆ ನಿರೂಪಿಸಿದರು. ಡಾ.ಬಿ.ಡಿ. ಪಾಟೀಲ ವಂದಿಸಿದರು.

ನಗದು ಪುರಸ್ಕಾರ

ದ್ವೀತಿಯ ಪಿಯುಸಿ ಪರೀೆಯಲ್ಲಿ ಕರ್ನಾಟಕಕ್ಕೆ ವಾಣಿಜ್ಯ ವಿಭಾಗದಲ್ಲಿ 3ನೇ ರ್ಯಾಂಕ್​ ಪಡೆದ ತನ್ವಿ ಹೇಮಂತ ಪಾಟೀಲ, 7ನೇ ರ್ಯಾಂಕ್​ ಪಡೆದ ಪೂರ್ವಿ ರಾಜಪುರೋಹಿತ, 10ನೇ ರ್ಯಾಂಕ್​ ಪಡೆದ ಬ್ರಾಹ್ಮಿ ನರಸಗೌಡ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ, ನಗದು ಬಹುಮಾನ ನೀಡಿ ಗೌರವಿಸಲಾಯಿತು. ಇನ್ನೂ ಜಿಲ್ಲೆಗೆ ರ್ಯಾಂಕ್​ ಬಂದ ವಿದ್ಯಾರ್ಥಿಗಳಿಗೂ ನಗದು ನೀಡಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net