

ಭದ್ರಾವತಿ: ರಾಜ್ಯ ಸರ್ಕಾರ ಹಾಗೂ ಪರೀಕ್ಷಾ ಪ್ರಾಽಕಾರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಾವುದೇ ಅರ್ಜಿ ಶುಲ್ಕವಿಲ್ಲದೆ ನಡೆಸಿದರೆ ವಿದ್ಯಾರ್ಥಿಗಳಲ್ಲಿ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಉತ್ಸಾಹ ಬೆಳೆಯುತ್ತದೆ ಎಂದು ಸ್ಪರ್ಧಾತ್ಮಕ ಪರೀಕ್ಷೆ ಸಂಪನ್ಮೂಲ ವ್ಯಕ್ತಿ ನಾಗರಾಜ್ ಕೋಣನೂರ್ ಹೇಳಿದರು.
ಸೋಮವಾರ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ಸಿದ್ಧ್ದತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅರ್ಜಿ ಶುಲ್ಕ ರಹಿತ ಪರೀಕ್ಷೆಗಳು ನಡೆಸಿದರೆ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಪ್ರತಿಭಾನ್ವಿತ ಅಭ್ಯರ್ಥಿಗಳು ಇದರ ಸದುಪಯೋಗ ಪಡೆಯಲು ಸಹಕಾರಿಯಾಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸುವುದು ಸೂಕ್ತ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಬೇಕು ಎಂಬ ಆಸೆ ಎಲ್ಲ ವಿದ್ಯಾರ್ಥೀಗಳಲ್ಲಿಯೂ ಇರುತ್ತದೆ. ಅದಕ್ಕೆ ಪೂರ್ವ ತಯಾರಿ ಬಹಳ ಮುಖ್ಯ. ನಿರಂತರ ಓದುವುದರಿಂದ ಯಾವುದೇ ಪ್ರಯೋಜನವಿಲ್ಲ. ಓದಿನ ನಡುವೆ ವಿಶ್ರಾಂತಿ ಜತೆಗೆ ಏಕಾಗ್ರಯಿಂದ ಅಧ್ಯಯನ ಅಗತ್ಯ. ಜತೆಗೆ ಸರಿಯಾದ ಸಮಯದಲ್ಲಿ ಆಹಾರ ಸೇವನೆ, ವ್ಯಾಯಾಮ, ಕನಿಷ್ಠ ೬-೮ಗಂಟೆಯ ನಿದ್ರೆ ಹಾಗೂ ಆತ್ಮವಿಶ್ವಾಸ ಮುಖ್ಯ ಎಂದರು.
ಕಾಲೇಜು ಪ್ರಾಚಾರ್ಯೆ ಶೈಲಜಾ ಹೊಸಳ್ಳೇರ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕ ಮಹಮದ್ ನಜೀಬ್, ಅಕ್ರಮ್ ಪಾಷ, ಪ್ಲೇಸ್‌ಮೆಂಟ್ ಕೋಆರ್ಡಿನೇಟರ್ ವಿ.ಬಿ.ಚಿರಂಜೀವಿ, ಡಾ.ಟಿ.ಜಿ.ಉಮಾ, ಬಿ.ಗುರುಪ್ರಸಾದ್ ಸೇರಿದಂತೆ ಇತರರಿದ್ದರು.
ಓದುವಾಗ ಮೊಬೈಲ್‌ನಿಂದ ದೂರ ಇರಬೇಲಿ. ಹಿಂದಿನ ವರ್ಷದ ಹಳೆಯ ಪ್ರಶ್ನೆಪತ್ರಿಕೆಗಳನ್ನು ಓದುವುದು, ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಳ್ಳುವುದು, ಅಣುಕು ಪರೀಕ್ಷೆಗಳನ್ನು ಆಗಾಗ್ಗೆ ಬರೆಯುವುದರಿಂದ ಬಹುದೊಡ್ಡ ಯುಪಿಎಸ್‌ಸಿಯಂಥಹ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು.| ನಾಗರಾಜ್ ಕೋಣನೂರ್ಸಂಪನ್ಮೂಲ ವ್ಯಕ್ತಿ