ನಿರಂತರ ಓದು ಬದುಕಿನ ಯಶಸ್ಸಿಗೆ ಹಾದಿ

snd 7-1
ಸಿಂದಗಿ ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಗಳಿಸಿದ ಡಾ. ಮಹೇಶ ಆರ್. ಮಡಿವಾಳರ ಮಾತನಾಡಿದರು. ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಎಂ.ಎಸ್. ಹಯ್ಯಳಕರ, ಎಸ್.ಎಂ. ಪೂಜಾರಿ ಮತ್ತಿತರರಿದ್ದರು.
Published on

ಸಿಂದಗಿ: ನಮ್ಮ ಬದುಕಿನ ಗುರಿ ಹಾಗೂ ನಿರಂತರ ಒಡನಾಟದಿಂದ ಯಶಸ್ಸು ಸಾಧ್ಯ ಎಂದು ಯುಪಿಎಸ್‌ಸಿ ರ‌್ಯಾಂಕರ್ ಡಾ. ಮಹೇಶ ಮಡಿವಾಳರ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಿದರೆ ಅವರು ಅಂದುಕೊಂಡು ನಿಶ್ಚಿತ ಗುರಿ ಮತ್ತು ಸಾಧನೆ ತೋರಬಹುದು. ಪದವಿ ವಿದ್ಯಾರ್ಥಿಗಳು ಐಎಎಸ್ ಅಥವಾ ಕೆಎಎಸ್ ಪರೀಕ್ಷೆ ತಯಾರಿಯಲ್ಲಿದ್ದರೆ, ನಿಸ್ಸಂದೇಹವಾಗಿ ನನ್ನನ್ನು ಸಂಪರ್ಕಿಸಿದರೆ ಅವರ ಸಂದೇಹ ಮತ್ತು ಸಮಸ್ಯಾತ್ಮಕ ಪ್ರಶ್ನೆಗಳಿಗೆ ಉತ್ತರ ಮತ್ತು ಪರೀಕ್ಷೆ ಸಿದ್ಧತೆಗಳಿಗೆ ಅಗತ್ಯ ಸಲಹೆ ನೀಡುವುದಾಗಿ ಭರವಸೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಎಂ.ಎಸ್. ಹಯ್ಯಳಕರ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯವನ್ನು ಕಾಲೇಜು ಕೀರ್ತಿಗೆ ಸರಿಗಟ್ಟಲಿ ಎಂದು ಆಶಿಸಿದರು.

ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಾಚಾರ್ಯ ಎಸ್.ಎಂ. ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳಾ ವಿಶ್ವವಿದ್ಯಾಲಯಕ್ಕೆ ರ‌್ಯಾಂಕ್ ಪಡೆದ ಬಿಎಸ್‌ಡಬ್ಲೂೃ ವಿಭಾಗದ ಐಶ್ವರ್ಯ ತಮದೊಡ್ಡಿ ಹಾಗೂ ವಿಶ್ವವಿದ್ಯಾಲಯದ ಖೋ-ಖೋ ತಂಡಕ್ಕೆ ಬ್ಲೂೃ ಆಗಿ ಆಯ್ಕೆಯಾದ ವಿದ್ಯಾರ್ಥಿನಿ ಸಿದ್ದಮ್ಮ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ವಿ.ಡಿ. ಪಾಟೀಲ, ಉಪನ್ಯಾಸಕ ಮಹಾಂತೇಶ ನೂಲಾನವರ, ಜಿ.ಎ. ನಂದಿಮಠ, ವಿ.ಪಿ. ನಂದಿಕೋಲ, ಜಿ.ಎಸ್. ಕುಲಕರ್ಣಿ, ಎ.ಆರ್. ರಜಪೂತ, ಯು.ಸಿ. ಪೂಜೇರಿ, ಎಸ್.ಎನ್. ಕುಂದಗೋಳ, ಎನ್.ಬಿ. ಬಿರಾದಾರ, ಎಂ.ಕೆ. ಬಿರಾದಾರ, ಬಿ.ಬಿ. ನಂದಿಮಠ, ಜಿ.ವಿ. ಪಾಟೀಲ, ಎಂ.ಎಂ. ಈಳಗೇರ, ಎಸ್.ಎಸ್. ದುದ್ದಗಿ, ಡಿ.ಎಂ. ಪಾಟೀಲ, ಸತೀಶ ಕಕ್ಕಸಗೇರಿ, ಹೇಮಾ ಕಾಸರ, ಶಂಕರ ಕುಂಬಾರ, ಮಮತಾ ಹರನಾಳ, ವಿಜಯಲಕ್ಷ್ಮೀ ಭಜಂತ್ರಿ ಸೇರಿ ಮಹಾವಿದ್ಯಾಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಎಸ್.ಸಿ. ದುದ್ದಗಿ ವರದಿ ವಾಚಿಸಿದರು.

ಉಪನ್ಯಾಸಕಿ ಹೇಮಾ ಹಿರೇಮಠ ಸ್ವಾಗತಿಸಿದರು. ವಿದ್ಯಾರ್ಥಿ ವಿಶಾಲಾಕ್ಷಿ ಬಿರಾದಾರ ಪ್ರಾರ್ಥಿಸಿದರು. ಮಧುಶ್ರೀ ಮತ್ತು ಸೀಮಾ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮೀನಾಜ ಗೋಲಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net