

ಶನಿವಾರಸಂತೆ: ಕೊಡಗು ಜಿಲ್ಲೆಯಲ್ಲಿ ಕಳೆದ ಮೇ ತಿಂಗಳಿಂದ ಸುರಿಯುತ್ತಿರುವ ಗಾಳಿ, ಮಳೆಗೆ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶನಿವಾರಸಂತೆ ಭಾಗದಲ್ಲಿ ಪ್ರತಿ ವರ್ಷ ಕಾಫಿ ಬೆಳೆಗಾರರು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದ್ದು, ಪ್ರಾರಂಭದಲ್ಲಿ ಮಳೆ ಬಾರದೆ ತೊಂದರೆ ಆದ ನಂತರ ಮಳೆ ಹೆಚ್ಚು ಬಂದು ಮತ್ತೆ ತೊಂದರೆ ಎದುರಿಸುವಂತಾಗಿದೆ. ಈ ವರ್ಷ ಮೇ ತಿಂಗಳಿನಿಂದ ಮಳೆ ನಿಗದಿಗಿಂತ ಹೆಚ್ಚು ಬಂದಿದ್ದು, ಜೂನ್‌ನಲ್ಲೂ ಅಧಿಕ ಮಳೆ ಸುರಿದಿದೆ. ಹೀಗೆ ಮುಂದುವರಿದಿದೆ.
ಶನಿವಾರಸಂತೆಯಲ್ಲಿ ಗುರುವಾರ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಸಂವಾದದಲ್ಲಿ ಕಾಫಿ ಬೆಳೆಗಾರರು ಅಳಲು ತೋಡಿಕೊಂಡರು.
ಈ ಭಾಗದಲ್ಲಿ ಕಾಫಿ ಫಸಲು ಉತ್ತಮವಾಗಿತ್ತು. ಆದರೆ ಇದೀಗ ಸುರಿಯುತ್ತಿರುವ ಮಳೆಯಿಂದ ಕಾಫಿ ನೆಲ ಕಚ್ಚುತ್ತಿದೆ. ಕೈಗೆ ಬಂದ ಫಸಲನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಜತೆಗೆ ಕಾಳುಮೆಣಸು ಆದಾಯ ತರುವ ಬೆಳೆ ಆಗಿದ್ದು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬಳ್ಳಿಯಲ್ಲಿ ದಾರ ಕಟ್ಟುತ್ತಿಲ್ಲ ಎಂದು ಬೆಳೆಗಾರರು ತಮ್ಮ ಅಳಲು ತೋಡಿಕೊಂಡರು.
ಇದೇ ರೀತಿ ಮಳೆ ಮುಂದುವರಿದರೆ ಕಾಫಿ ಬೆಳೆಗಾರರು ತೀರಾ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಮಳೆಗೆ ಅರೇಬಿಕಾ ಕಾಫಿ ಬೆಳೆಯಲ್ಲಿ ಕೊಳೆ ರೋಗ ಸೇರಿದಂತೆ ಕಾಂಡ ಕೊರಕ ರೋಗ ಹೆಚ್ಚಾಗಿದ್ದು, ಇದನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಗಾಳಿಗೆ ದೊಡ್ಡ ಮರಗಳು ಕಾಫಿ ಗಿಡಗಳ ಮೇಲೆ ಬೀಳುತ್ತಿರುವುದರಿಂದ ಇನ್ನಷ್ಟು ತೊಂದರೆ ಎದುರಿಸುವಂತಾಗಿದೆ ಎನ್ನುತ್ತಾರೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಉಮಾಶಂಕರ್.
ಕಾಫಿ ತೋಟದಲ್ಲಿ ಇನ್ನು ಅನೇಕ ಕೆಲಸಗಳು ಬಾಕಿ ಉಳಿದಿವೆ. ಪ್ರತಿವರ್ಷ ಜೂನ್ ನಂತರ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಒಂದು ತಿಂಗಳು ಮುಂಚೆನೇ ಮಳೆ ಆಗಿರುವುದರಿಂದ ಮರದ ರೆಂಬೆ ತೆಗೆಸಲು ಸಾಧ್ಯವಾಗಿಲ್ಲ, ತೋಟಕ್ಕೆ ಹಾಕಿದ ರಾಸಾಯನಿಕ ಗೊಬ್ಬರ ನೀರು ಪಾಲಾಗಿದೆ. ಒಂದೆಡೆ ರಸಗೊಬ್ಬರ ಬೆಲೆ ಗಗನಕ್ಕೆ ಏರಿದೆ. ಇನ್ನೊಂದೆಡೆ ಕಾರ್ಮಿಕರ ವೇತನ ಹೆಚ್ಚಾಗುತ್ತಿದೆ. ಕಾಫಿ ಬೆಳೆಗರಾರು ಕಾಫಿ ತೋಟವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುವಂತಾಗಿದೆ ಎಂದು ಮೀನಾ ಗಿರೀಶ್ ಹೇಳಿದರು.
ಕಾಫಿ ಹಾಗೂ ಕಾಳು ಮೆಣಸು ಉತ್ತಮ ಬೆಲೆ ಪ್ರಾರಂಭದಲ್ಲಿ ಇತ್ತು. ಆದರೆ ಅನೇಕ ಬೆಳೆಗಾರರು ಮಾರಾಟ ಮಾಡಿಲ್ಲ. ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗುತ್ತದೆ ಎಂದು ಬೆಳೆದ ಕಾಫಿ ಹಾಗೂ ಕಾಳು ಮೆಣಸನ್ನು ಸಂಗ್ರಹಣೆ ಮಾಡಿ ಇಟ್ಟಿದ್ದಾರೆ. ಆದರೆ ನಿರಂತರವಾಗಿ ಮಳೆ ಬರುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬೆಳೆಯಲ್ಲೂ ತುಂಬ ಏರಿಳಿತವಾಗಿದ್ದು ಇದು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಈ ವರ್ಷ ಮಳೆ ಹೆಚ್ಚು ಬರುತ್ತಿರುವುದರಿಂದ ಕಾಫಿ ಕಾಯಿಗಳು ನೆಲ ಕಚ್ಚುತ್ತಿವೆ. ಇದರಿಂದ ಮುಂದೆ ಯಾವ ರೀತಿ ಕೆಲಸ ಮಾಡಿಸುವುದು ಎಂದು ತೋಚುತ್ತಿಲ್ಲ. ಕಾಫಿ ಬೆಳೆಗಾರರು ಪ್ರತಿ ವರ್ಷ ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕುತ್ತಿದ್ದೇವೆ. ಮನೋಜ್‌ಕುಮಾರ್ ಕಾಫಿ ಬೆಳೆಗಾರ, ಮುಳ್ಳೂರು ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಬೆಲೆ, ಕೀಟನಾಶಕ ಬೆಲೆ ಹಾಗೂ ಕಾರ್ಮಿಕರ ವೇತನ ಹೆಚ್ಚಾಗುತ್ತಿದೆ. ಕಾಫಿ ಬೆಲೆ ನೋಡಿ ಎಲ್ಲ ದರಗಳು ಹೆಚ್ಚಾಗುತ್ತಿವೆ. ಆದರೆ, ಕಾಫಿ ತೋಟಗಳನ್ನು ಉಳಿಸಿಕೊಳ್ಳಲು ಎಷ್ಟು ಬೆಳೆದರೂ ಗೊಬ್ಬರ ಹಾಕಲೇಬೇಕಿದೆ. ಚಂದ್ರಶೇಖರ್ ಕಾಫಿ ಬೆಳೆಗಾರ, ಸಂಪಿಗೆದಾಳು ಕಾಳುಮೆಣಸು ಕಾಳು ಕಟ್ಟಿಲ್ಲ. ಇಲ್ಲಿನ ಮಣ್ಣಿಗೆ ಇದೀಗ ಮಳೆ ಬರುತ್ತಿರುವುದು. ತೊಂದರೆ ಆಗಿದೆ. ಒಮ್ಮೆ ಮಳೆ ನಿಲ್ಲಲಿ ಎಂದು ಕಾಯುತ್ತಿದ್ದೇವೆ. ತೋಟದಲ್ಲಿ ಅನೇಕ ಕೆಲಸಗಳು ಆಗಿಲ್ಲ. ಮೀನಾ ಗಿರೀಶ್ ಕಾಫಿ ಬೆಳೆಗಾರ ಬೆಟ್ಟದಳ್ಳಿ ಕಾಫಿ ತೋಟದ ಕಾಫಿ ಕಾಯಿ ಉದುರುತ್ತಿದೆ. ಜತೆಗೆ ಕಾಂಡಕೊರಕ ರೋಗ ಹಾಗೂ ಕೊಳೆರೋಗ ಪ್ರಾರಂಭವಾಗುವ ಭೀತಿ ಎದುರಾಗಿದೆ. ನಾವು ಇದನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದೇವೆ. ಇದೀಗ ಬರುತ್ತಿರುವ ಮಳೆಗೆ ಕಾಫಿ ಬೆಳೆಗಾರರು ತೊಂದರೆ ಎದುರಿಸಬೇಕಾಗಿದೆ. ವಿನೋದ್‌ಕುಮಾರ್ ಮುದರವಳ್ಳಿ ಕಾಫಿ ತೋಟಗಳಿಗೆ ರಸಗೊಬ್ಬರ ಹಾಗೂ ಕೀಟನಾಶಕ ಹಾಕಲೇ ಬೇಕು. ಇಂದು ಆದಾಯಗಳಿಸಲು ಅನಿವಾರ್ಯ, ಕಾಫಿ ತೋಟದ ದೊಡ್ಡ ದೊಡ್ಡ ಮರಗಳು ಗಾಳಿ ಮಳೆಗೆ ಕಾಫಿ ಗಿಡಗಳ ಮೇಲೆ ಬಿಳುತ್ತಿವೆ. ಇದರಿಂದ ಕಾಫಿ ಬೆಳೆಗಾರರು ತೊಂದರೆ ಎದುರಿಸುವಂತಾಗಿದೆ. ಉಮಾಶಂಕರ್ ಅಧ್ಯಕ್ಷ, ಕಾಫಿ ಬೆಳೆಗಾರರ ಸಂಘ ಮುಂದೆ ಕೆಲಸ ಮಾಡಲು ಯೋಚನೆ ಮಾಡುವಂತಾಗಿದೆ ಕಾಫಿಗೆ ಉತ್ತಮ ಬೆಲೆ ಇತ್ತು. ಅನೇಕರು ಪ್ರತಿ ವರ್ಷದಂತೆ ಜೂನ್, ಜುಲೈ ತಿಂಗಳಿನಲ್ಲಿ ಮಾರಾಟ ಮಾಡುತ್ತಾರೆ. ಆ ಸಮಯದಲ್ಲಿ ಉತ್ತಮ ಮಾರುಕಟ್ಟೆ ಸಿಗುತ್ತದೆ ಎಂಬ ನಂಬಿಕೆ ಬೆಳೆಗಾರರದ್ದು. ಇದೀಗ ಕಾಫಿ ಹಾಗೂ ಕಾಳುಮೆಣಸು ಬೆಳೆಗೆ ಬೆಲೆ ಕಡಿಮೆ ಆಗಿದೆ. ಇದು ಮುಂದೆ ಕೆಲಸ ನಿರ್ವಹಿಸಲು ಯೋಚನೆ ಮಾಡುವಂತಾಗಿದೆ. ಶರತ್‌ಶೇಖರ್ ಕಾಫಿ ಬೆಳೆಗಾರ ಅರೇಬಿಕಾ ಕಾಫಿಗೆ ಕಾಂಡಕೊರಕ ರೋಗ ಹೆಚ್ಚಾಗುತ್ತಿದೆ. ಕೊಳೆ ರೋಗ ಭೀತಿ ಎದುರಾಗಿದೆ. ಮಳೆ ಮುಂದುವರಿದರೆ ಈ ಭಾಗದ ಬೆಳೆಗಾರರ ಸ್ಥಿತಿ ಶೋಚನೀಯವಾಗಲಿದೆ. ಸಮಸ್ಯೆಗೆ ಸರ್ಕಾರ ಸ್ಪಂದನೆ ನೀಡಬೇಕಿದೆ. ಗೊಬ್ಬರ, ಕೀಟನಾಶಕಗಳ ಬೆಲೆ ಕಡಿಮೆ ಮಾಡಬೇಕು. ಮೋಹನ್ ಕಾಫಿ ಬೆಳೆಗಾರ, ಬೀಳಹ