ಜಿಲ್ಲೆಯ ವಿವಿಧಡೆ ನಿರಂತರ ಮಳೆ

Published on

ಬಳ್ಳಾರಿ; ಜಿಲ್ಲೆಯ ವಿವಿಧಡೆ ಬುಧವಾರ ಸಂಜೆ ಹಾಗೂ ತಡರಾತ್ರಿ ಬಿರುಸಿನ ಮಳೆ ಸುರಿಯಿತು. ನಗರದಲ್ಲಿ ಮಳೆಯಿಂದ ವಿವಿಧ ಕಾಲನಿಗಳಲ್ಲಿ ರಸ್ತೆಗಳ ಮೇಲೆ ನೀರು ಹರಿದವು ಹಾಗೂ ಒಳ ಚರಂಡಿಯ ಅವವ್ಯಸ್ಥೆಯಿಂದ ಕೆಲ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದವು. ಅಲ್ಲದೆ, ರಾಜಕಾಲುವೆಗಳಲ್ಲಿ ಕಳೆದ ಕೆಲ ತಿಂಗಳಿಂದ ಸ್ವಚ್ಛಗೊಳಿಸದ ಪರಿಣಾಮ ಪ್ರಮುಖ ಬೀದಿಗಳಲ್ಲಿ ಹರಿದವು. ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಂತ ಪರಿಣಾಮ ಗುರುವಾರ ಬೆಳಗ್ಗೆ ವಾಹನ ಸವಾರರು ಸಂಚಾರಿಸಲು ಪರದಾಡಿದರು.

ಗ್ರಾಮೀಣ ಭಾಗದಲ್ಲಿ ಹಳ್ಳ, ಕೊಳ್ಳಗಳು ತುಂಬಿ ಹರಿ ಹರಿದವು. ಸಂಡೂರು ತಾಲೂಕಿನ ತಾರಾನಗರ ಗ್ರಾಮದ ಹೊರ ವಲಯದಲ್ಲಿನ ನಾರಿಹಳ್ಳ ಜಲಾಶಯವು ನಿರಂತರ ಮಳೆಗೆ ಸಂಪೂರ್ಣ ಭರ್ತಿಯಾಗಿದ್ದು, ಬುಧವಾರ ರಾತ್ರಿ ನಾರಿಹಳ್ಳಕ್ಕೆ ಒಂದು ಗೇಟ್ ಮೂಲಕ ಒಂದು ನೀರನ್ನು ಹೊರಗೆ ಹರಿ ಬಿಡಲಾಗಿದೆ.

ಕಳೆದ ವರ್ಷ ಮಳೆಯು ಉತ್ತಮವಾಗಿ ಸುರಿದಿದ್ದರಿಂದ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಣೆಗೊಂಡಿತ್ತು. ಪ್ರಸ್ತತು ಪೂರ್ವ ಮುಂಗಾರು ಮಳೆಯು ನಿರಂತರವಾಗಿ ಸುರಿದ ಪರಿಣಾಮವಾಗಿ ಜಲಾಶಯವು ಬೇಗನೆ ಭರ್ತಿಯಾಗಿದ್ದರಿಂದ ತಾಲೂಕಿನ ಜನರು ಸಂತಸಗೊಂಡಿದ್ದಾರೆ. ಅಲ್ಲದೆ, ಜಲಾಶಯದಿಂದ ನೀರನ್ನು ಹೊರ ಹರಿ ಬಿಡುವ ವಿಚಾರವಾಗಿ ಜಲಾಶಯದ ಕಳೆಭಾಗದ ಎಲ್ಲ ಗ್ರಾಮಗಳ ಜನರಿಗೆ ಜಲಾಶಯ ಸಮೀಪಕ್ಕೆ ಯಾರೂ ಸಂಚರಿಸಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net