

ಹೊಸಪೇಟೆ: ವಿಜಯನರಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಬುಧವಾರ ದಿನಿವಿಡೀ ಸುರಿದ ಜಿಟಿ ಜಿಟಿ ಮಳೆಗೆ ಜನರು ಹೈರಾಣಾದರು. ಸತತ ಮಳೆಗೆ ಹರಪನಹಳ್ಳಿ ತಾಲೂಕಿನಲ್ಲಿ ಎರಡು ಮಣ್ಣಿನ ಮನೆಗೆಳು ನೆಲಕ್ಕುರುಳಿವೆ.
ಮಂಗಳವಾರ ಸಂಜೆಯಿAದಲೇ ಶುರುವಾಗಿರುವ ಜಿಟಿ ಮಳೆ ಬುಧವಾರ ರಾತ್ರಿವರೆಗೂ ಮುಂದುವರಿಯಿತು. ನಿರಂತರವಾಗಿ ಸುರಿಯುವ ತುಂತುರು ಮಳೆಯಿಂದಾಗಿ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಯಿತು. ಬೆಳಗ್ಗೆ ಶಾಲಾ, ಕಾಲೇಜು ಹಾಗೂ ಕಚೇರಿಗಳಿಗೆ ತೆರಳುವ ಹಾಗೂ ಸಂಜೆ ಮನೆಗೆ ಹಿಂದುರುಗುವಾಗ ಸುರಿಯುತ್ತಿದ್ದ ಮಳೆಯಿಂದ ರಕ್ಷಿಸಿಕೊಳ್ಳಲು ರೇನ್ ಕೋಟ್, ಛತ್ರಿಗಳ ಮೊರೆ ಹೋಗುವಂತಾಯಿತು. ಸತತ ಮಳೆಯಿಂದಾಗಿ ಜನರು ಹೊರಗೆ ಕಾಲಿಡದಂತಾಗಿದ್ದರಿAದ ನಗರದ ಬಹುತೇಕ ರಸ್ತೆಗಳು ಖಾಲಿಯಾಗಿದ್ದವು.
ಸತತ ೨೪ ಗಂಟೆಗಳ ಕಾಲ ಸುರಿದ ಜಿಟಿ ಮಳೆಯಿಂದಾಗಿ ರೈತಾಪಿ ಜನರಲ್ಲಿ ಹರ್ಷ ಮೂಡಿಸಿದೆ. ಈಗಾಗಲೇ ಮುಂಗಾರು ಮಳೆ ವಿಳಂಬದಿAದ ಕಂಗೆಟ್ಟಿದ್ದ ರೈತರಿಗೆ ಈ ಮಳೆ ಹೊಸ ಭರವಸೆ ಮೂಡಿಸಿದೆ. ಜಮೀನುಗಳಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವ ರೈತರು ತಲೆ ಮೇಲೆ ಟವೆಲ್ ಹಾಕಿಕೊಂಡು ಮಳೆಯಿಂದ ರಕ್ಷಣೆ ಪಡೆದರು.
ಹಡಗಲಿಯಲ್ಲಿ ೧೦ ಮಿ.ಮಿ. ಮಳೆ: ಬುಧವಾರ ಬೆಳಗ್ಗೆ ೮ ಗಂಟೆಗೆ ಅಂತ್ಯಗೊAಡAತೆ ಜಿಲ್ಲೆಯಲ್ಲಿ ಅಂದಾಜು ೪೦ ಮಿ.ಮೀ. ಮಳೆಯಾಗಿದ್ದು, ಈ ಪೈಕಿ ಹೂವಿನಹಡಗಲಿಯಲ್ಲಿ ೧೦.೨ ಮಿ.ಮೀ. ಮಳೆ ದಾಖಲಾಗಿದೆ. ಇನ್ನುಳಿದಂತೆ ಎಚ್.ಬಿ.ಹಳ್ಳಿಯಲ್ಲಿ ೫.೪, ಹೊಸಪೇಟೆಯಲ್ಲಿ ೫.೨, ಕೂಡ್ಲಿಗಿಯಲ್ಲಿ ೨.೮, ಹರಪನಹಳ್ಳಿಯಲ್ಲಿ ೬.೪ ಹಾಗೂ ಕೂಡ್ಲಿಗಿಯಲ್ಲಿ ೭.೮ ಮಿ.ಮೀ. ಮಳೆ ಸುರಿದಿದೆ.
ಜಿಟಿ ಮಳೆಯಿಂದಾಗಿ ಹರಪನಹಳ್ಳಿ ತಾಲೂಕಿನಲ್ಲಿ ಮಾತ್ರ ಎರಡು ಮನೆಗಳು ಕುಸಿದು ಬಿದ್ದಿವೆ ಎಂದು ತಿಳಿದು ಬಂದಿದೆ.