ನಿರಂತರ ಮಳೆ 75ಕ್ಕೂ ಹೆಚ್ಚು ಮನೆಗಳಿಗೆ ಹಾನಿ

Continuous rain damages more than 75 houses
Published on

ದೇವರಹಿಪ್ಪರಗಿ:ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಗೆ ವಿವಿಧ ಗ್ರಾಮಗಳಲ್ಲಿ ಅಂದಾಜು 75ಕ್ಕೂ ಹೆಚ್ಚು ಮನೆಗಳು ಸೇರಿ ಪುರಾತನ ಹುಡೇ ಬಿದ್ದು ಹಾನಿಗೀಡಾಗಿವೆ.ತಾಲೂಕಿನ ಪಟ್ಟಣದ ಹಂಚಲಿ, ದೇವೂರ, ಕಡಕೋಳ, ಕೊಂಡಗೂಳಿ, ಪಡಗಾನೂರ, ಕೋರವಾರ, ಮುಳಸಾವಳಗಿ, ಕಡ್ಲೇವಾಡ ಪಿಸಿಎಚ್​, ಕೆರೂಟಗಿ, ಆಲಗೂರ, ಚಿಕ್ಕರೂಗಿ, ಕಡಕೋಳ, ಯಾಳವಾರ, ಭೈರವಾಡಗಿ, ಮಾರ್ಕಬ್ಬಿನಹಳ್ಳಿ, ಜಾಲವಾದ ಗ್ರಾಮಗಳಲ್ಲಿ ಮಣ್ಣಿನ ಮನೆಗಳು ಕುಸಿದಿವೆ. ಅಲ್ಲದೆ, ಶನಿವಾರ ಮಣ್ಣೂರ ಗ್ರಾಮದ ಪುರಾತನ ಹುಡೇ ಕುಸಿದಿದ್ದು ಯಾವುದೇ ಜೀವಹಾನಿ ಆಗಿಲ್ಲ.

ತಾಲೂಕಿನ ಗ್ರಾಮಗಳಲ್ಲಿ ಬಿದ್ದ ಮನೆಗಳಿಗೆ ಈಗಾಗಲೇ ತಹಸೀಲ್ದಾರ್​ ಪ್ರಕಾಶ್​ ಸಿಂದಗಿ ಹಾಗೂ ಗ್ರಾಮಗಳ ಗ್ರಾಮಾಡಳಿತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡು ವರದಿ ಸಲ್ಲಿಸಿದ್ದಾರೆ ಎಂದರು.ಬಿದ್ದ ಮನೆಗಳು ಹಾಗೂ ಪುರಾತನ ಹುಡೇ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲು ಮಣ್ಣೂರ ಗ್ರಾಪಂ ಉಪಾಧ್ಯ ಅಂಬಣ್ಣ ಆನೆಗುಂದಿ, ಸದಸ್ಯರಾದ ಅಬ್ಬಾಸಲಿ ಬಾಗವಾನ, ವಸಂತ ರಾಠೋಡ, ಬಸವರಾಜ ವಾಲಿ, ರಾಜಶೇಖರ ಮಣೂರ, ಮುಳಸಾವಳಗಿ ಗ್ರಾಮದ ಸುಭಾಸ್​ ನಾಯ್ಕೋಡಿ ಆಗ್ರಹಿಸಿದರು.

ದೇವರಹಿಪ್ಪರಗಿ ತಾಲೂಕಿನ ಮಣ್ಣೂರ ಗ್ರಾಮದ ಪುರಾತನ ಹುಡೇ ಕುಸಿದಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net