ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಲಿಕೆ ಅಗತ್ಯ

h24-kims
Published on

ಹುಬ್ಬಳ್ಳಿ: ಎರಡು ದಶಕಗಳ ಹಿಂದೆ ಹೋಲಿಸಿದರೆ ಈಗ ಸುಧಾರಿತ ತಂತ್ರಜ್ಞಾನ ಬಂದಿದೆ. ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ನೀಡುವಲ್ಲಿ ಎಕ್‌ರೇ ಇಮೇಜಿಂಗ್ ಅಧಿಕಾರಿಗಳ ಪಾತ್ರ ಬಲುದೊಡ್ಡದಿದೆ ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಹೇಳಿದರು.
ಕರ್ನಾಟ ರಾಜ್ಯ ಸರ್ಕಾರಿ ರೇಡಿಯಾಲೋಜಿ ಇಮೇಜಿಂಗ್ ಅಧಿಕಾರಿಗಳ ಸಂಘ(ಕೆಎಸ್‌ಜಿಆರ್‌ಐಒಎ) ವತಿಂದ ಇಲ್ಲಿಯ ಕೆಎಂಸಿಆರ್‌ಐ ಸಭಾಂಗಣದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಆಯೋಜಿಸಿರುವ 14ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ರೆಡಿಕಾನ್-14 ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಲಿಕೆ ಅಗತ್ಯ. ನಾನು ವೈದ್ಯನಾಗಿ ಎಲ್ಲವನ್ನೂ ಕಲಿತಿದ್ದೇನೆ ಎನ್ನುವುದು ಮೂರ್ಖತನ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಕಳೆದುಕೊಳ್ಳಬಾರದು ಎಂದರು. ಇದೇ ವೇಳೆ ಸಂಘದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಕ್ಷ-ಕಿರಣ ವಿಭಾಗದ ಡಾ. ಪುನೀತ ನಾಯ್ಕ ಮಾತನಾಡಿದರು.
ಕೆಎಸ್‌ಜಿಆರ್‌ಐಒಎ ಅಧ್ಯಕ್ಷ ಡಾ. ಎಂ.ಆರ್. ರಾಮಚಂದ್ರರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಡಾ. ಕೆ.ಎಫ್. ಕಮ್ಮಾರ, ಉದಯಕುಮಾರ ಹೊನವಾಡಕರ, ಡಾ.ಜಿ.ಸಿ. ಪಾಟೀಲ, ಮಲ್ಲಿಕಾರ್ಜುನ ಬಳ್ಳಾರಿ, ಕೆಎಸ್‌ಜಿಆರ್‌ಐಒಎ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್.ಎ. ವಾಜೀದ, ಪ್ರಧಾನ ಕಾರ್ಯದರ್ಶಿ ಮುನಿ ಅಂಜಿನಪ್ಪ, ಖಜಾಂಚಿ ವೆಂಕಟೇಶ ಬಾಬು, ರೆಡಿಕಾನ್-14 ಉಪಾಧ್ಯಕ್ಷ ಲಕ್ಷ್ಮಣ ಮುದಗಣ್ಣವರ, ಶಿವಯೋಗಿ ದೊಟಾಳಿ, ಪರಶುರಾಮ ಗುಂಜಾಳ, ಮಂಜುನಾಥ ದೊಡ್ಡಮನಿ ಇತರರಿದ್ದರು. ರೆಡಿಕಾನ್-14 ಚೇರ್ಮನ್ ಅಶೋಕ ವಾಲ್ಮೀಕಿ ಸ್ವಾಗತಿಸಿದರು. ಕಿಮ್ಸ್ ನರ್ಸಿಂಗ್ ಕಾಲೇಜ್ ಉಪ ಪ್ರಾಚಾರ್ಯ ಹನುಮಂತಪ್ಪ ರಾಮದುರ್ಗ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net