ಯಶಸ್ಸಿಗೆ ನಿರಂತರ ಶ್ರಮ ಮುಖ್ಯ

23 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಲೇಜಿನ ಜೀವನ ಒಂದು ಪ್ರಮುಖ ಘಟ್ಟ. ಪದವಿ ಮುಗಿದ ನಂತರ ಜೀವನದಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಅನೇಕ ಜೀವಿಗಳು ಹುಟ್ಟುತ್ತವೆ, ಸಾಯುತ್ತವೆ. ಆದರೆ ಹುಟ್ಟಿದ ಜೀವಿಗಳಲ್ಲಿ ಮನುಷ್ಯ ಮಾತ್ರ ಏನಾಗಬೇಕು ಎಂಬ ಕನಸು ಕಾಣುತ್ತಾನೆ. ಗುರಿ ಸ್ಪಷ್ಟವಾಗಿದ್ದರೆ ಸಾಕು ಅನ್ನ ಮತ್ತು ಆತ್ಮತಪ್ತಿ ಸಿಗಲು ಸಾಧ್ಯ ಎಂದು ಪತ್ರಕರ್ತ ಅಜಿತ ಹನುಮಕ್ಕನವರ ಹೇಳಿದರು.
ನಗರದ ಜೆಎಸ್​ಎಸ್​ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವಾಷಿರ್ಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಶಸ್ಸು ಸಿಗಲು ನಿರಂತರ ಶ್ರಮ ಬೇಕು. ಮುಂದೆ ಅದೇ ಸಾಧನೆ ಆಗುತ್ತದೆ. ನಿರಂತರ ಅಭ್ಯಾಸ ಮತ್ತು ಧೈರ್ಯದಿಂದಲೇ ಅನೇಕ ಸಮಸ್ಯೆ ಎದುರಿಸಲು ಸಾಧ್ಯ. ಇಲ್ಲವಾದರೆ ಜೀವನದ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದರು.
ಡಾ. ಅಜಿತಪ್ರಸಾದ ಮಾತನಾಡಿ, ವ್ಯಕ್ತಿಯ ಆಸೆಯಗಳಿಗೆ ಮನ್ನಣೆ ದೊರೆಯಬೇಕಾದರೆ ನಿರಂತರ ಶ್ರಮದಿಂದ ಯೋಗ್ಯವಾದ ಸ್ಥಾನ ಅಲಂಕರಿಸಬೇಕು. ನಮ್ಮ ಶ್ರಮ ಸಾರ್ಥಕವಾದರೆ ಅದೇ ಉತ್ತಮ ಲ ಎಂಬ ಆಶಯ ವ್ಯಕ್ತಪಡಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿನದತ್ತ ಹಡಗಲಿ, ಕಾಲೇಜಿನ ಅಭಿವೃದ್ಧಿ ಅಧಿಕಾರಿ ಡಾ. ಸೂರಜ್​ ಜೈನ್​, ಆವಂತಿಕಾ ರೊಟ್ಟಿ, ಜೆ.ಆರ್​. ಕುಂದಗೋಳ, ಇತರರು ಇದ್ದರು.
ಡಾ. ಕೆ.ಎಚ್​. ನಾಗಚಂದ್ರ ಸ್ವಾಗತಿಸಿದರು. ಪವಿತ್ರಾ ಮತ್ತು ಸುದರ್ಶನ ನಿರೂಪಿಸಿದರು. ಅಪೂರ್ವ ಐಹೊಳೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net