

ತಲ್ಲೂರ: ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ತಂದು ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದಿಂದ ಜಾಲಿಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ 1 ಕೋಟಿ ರೂ. ಮೊತ್ತದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತೇನೆ. ಮುಂಬರುವ ದಿನಗಳಲ್ಲಿ ವಿವಿಧ ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸನ್ನವರ ಮಾತನಾಡಿ, ಗ್ರಾಮಗಳ ಸುಧಾರಣೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು. ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಶಾಸಕ ವಿಶ್ವಾಸ ವೈದ್ಯ ಅವರನ್ನು ಸನ್ಮಾನಿಸಿದರು. ಪ್ರಸನ್ನ ಹಿರೇಮಠ, ಮುಖಂಡರಾದ ಬಸಲಿಂಗಪ್ಪ ಕೊಪ್ಪದ, ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ಗ್ರಾಪಂ ಉಪಾಧ್ಯೆ ಶಾಂತವ್ವ ಉಪ್ಪಾರ, ಪಿಕೆಪಿಎಸ್ ಉಪಾಧ್ಯ ಈರಪ್ಪ ಬೆನಕಟ್ಟಿ, ಪಿಡಿಒ ಎಚ್.ಕೆ.ಚೌರಡ್ಡಿ, ಗ್ರಾಪಂ ಸದಸ್ಯ ಶಶಿಧರ ತಳವಾರ, ಕಲ್ಮೇಶ ಬಾಲರಡ್ಡಿ, ಬಸನಾಯ್ಕ ಚಿಕಾಕಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯ ಎಂ.ವಿ.ಉಪ್ಪಿನ, ಮುಖಂಡರಾದ ಶಿವಾನಂದ ಮಲಕನ್ನವರ, ಬಸವರಾಜ ಪೂಜೇರ, ಜಗದೀಶ ಹೊಸಮಠ, ಮುತ್ತನಗೌಡ ನಾಯ್ಕರ, ಶಿವಪ್ಪ ನಡವಿನಮನಿ, ಸಹದೇವ ಉಪ್ಪಿನ, ನೀಲಕಂಠ ಶಿವಪೂಜಿ, ಸುಭಾನಿ ಕುದರಿ, ಆರ್.ಕೆ.ಪಟಾತ, ಪಡೆಪ್ಪ ನರಿ ಇತರರಿದ್ದರು.