

ಮೂಲ್ಕಿ: ಸವಾಜ ಸಂಟಕರಾಗಿ, ಧಾರ್ಮಿಕ ಮತ್ತು ಸಾವಾಜಿಕ ಸೇವಾ ಕೈಂಕರ್ಯದಲ್ಲಿ ಗುರುವಪ್ಪ ಕೊಟ್ಯಾನ್ ಸಾಧನೆ ಯುವಜನತೆಗೆ ಪ್ರೇರಣೆಯಾಗಿದೆ ಎಂದು ಮೂಲ್ಕಿ ನಾಲ್ಕು ಪಟ್ಣ ಮೊಗವೀರ ಸಭಾ ಅಧ್ಯಕ್ಷ ಸುಜಿತ್ ಸಾಲ್ಯಾನ್ ಹೇಳಿದರು.
ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆದ ಮೂಲ್ಕಿ ನಾಲ್ಕು ಪಟ್ಣ ಮೊಗವೀರ ಸಭಾ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಮೊಗವೀರ ಸಭಾ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದ್ದು, ನಿರಂತರವಾಗಿ ನಡೆಯಲಿದೆ ಎಂದರು.
ಸಾಧಕರ ನೆಲೆಯಲ್ಲಿ ಸಭಾದ ಹಿರಿಯ ಸದಸ್ಯ ಗುರುವಪ್ಪ ಕೋಟ್ಯಾನ್ ಅವರನ್ನು ಗೌರವಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಲಚ್ಚಿಲ್ ಮೊಗವೀರ ಸಭಾದ ಅಧ್ಯಕ್ಷ ಪೂವಪ್ಪ ಕರ್ಕೇರ, ಚರಂತಿ ಪೇಟೆ ಮೊಗವೀರ ಸಭಾದ ಅಧ್ಯಕ್ಷ ಏಕನಾಥ ಕರ್ಕೇರ, ಮೂಲ್ಕಿ ನಾಲ್ಕು ಪಟ್ಣ ಮೊಗವೀರ ಸಭಾದ ಉಪಾಧ್ಯಕ್ಷ ಚಂದ್ರಕಾಂತ ಶ್ರೀಯಾನ್, ಕಾರ್ಯದರ್ಶಿ ಶಶಿಕಾಂತ್ ಕೋಟ್ಯಾನ್, ಕೋಶಾಧಿಕಾರಿ ಸೂರ್ಯ ಪುತ್ರನ್, ಪದಾಧಿಕಾರಿ ಗಿರೀಶ್ ಮೆಂಡನ್ ಮತ್ತಿತರರಿದ್ದರು.
ಚಂದ್ರಕಾಂತ್ ಶ್ರೀಯಾನ್ ವಂದಿಸಿದರು.