

ನಿಪ್ಪಾಣಿ: ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜೊಲ್ಲೆ ಕುಟುಂಬ ಸದಾ ಬದ್ಧವಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಬೆನಾಡಿ ಗ್ರಾಮದ ಮಂಗಾವತಿ ಮರಡಿಯಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆಗೊಂಡ 30 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ಎರಡು ಕೊಠಡಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಿಕ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಸಂಚಾಲಕ ರಮೇಶ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸತ್ಯಪ್ಪ ಹಜಾರೆ, ಪಾಂಡು ಪಾಟೀಲ, ಭರತ ಮಂಗಾವತಿ, ಬಿಜೆಪಿ ನಾಯಕಿ ಲಕ್ಷ್ಮೀ ಖೋತ, ಶಿವಗೌಡ ಜಕ್ಕಣ್ಣ, ಅಪ್ಪಾಸಾಹೇಬ ಸಾಂಗಾವೆ, ಸದಾಶಿವ ಜನವಾಡೆ, ರಾವಸಾಹೇಬ ಜನವಾಡೆ, ಗುಂಡು ಮಂಗಾವತೆ, ಕುಮಾರ ಮಂಗಾವತೆ, ಸುರೇಖಾ ಖೋತ, ಬಾಳಾಸಾಹೇಬ ದೇಸಾಯಿ, ವಿರೂಪಾಕ್ಷಿ ಭಂಡಾರಕರ ಇತರರಿದ್ದರು.