

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿಯ ವಿ.ಎಂ.ಕತ್ತಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪಿಯು ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮಂಗಳವಾರ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಯರಗಟ್ಟಿಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಕಿರಣ ಚೌಗಲಾ, ವಿದ್ಯಾರ್ಥಿಗಳು ಯಶಸ್ಸು ಕಾಣಬೇಕಾದರೆ ಜೀವನದಲ್ಲಿ ಪ್ರಯತ್ನ, ಏಕಾಗ್ರತೆ ಬೇಕು ಎಂದು ಹೇಳಿದರು.
ಬೆಲ್ಲದ ಬಾಗೇವಾಡಿಯ ವಿ.ಎಂ.ಕತ್ತಿ ಪ.ಪೂ. ಮಹಾವಿದ್ಯಾಲಯ ಪ್ರಾಚಾರ್ಯ ಎಸ್.ಎಂ.ಭಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕೆಗೆ ಆದ್ಯತೆ ನೀಡಬೇಕು. ಪಾಠದ ಹೊರತಾಗಿ ಅನಗತ್ಯ ವಿಷಯಗಳತ್ತ ಗಮನ ಹರಿಸಬಾರದು ಎಂದರು.
ವಿ.ಎಸ್.ಹೂಗಾರ, ಎಸ್.ಡಿ.ಬೆಳ್ಳಿಕಟ್ಟಿ, ಎನ್.ಎಸ್.ಪತ್ತಾರ, ಎ.ಎಸ್.ಕಾಳಗೆ, ಎಸ್.ಎಲ್.ಕಳಸನ್ನವರ, ಎಸ್.ಎಲ್.ಶಿಂಧೆ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಜೆ.ಎನ್.ಚನ್ನಿ ಮತ್ತಿತರರಿದ್ದರು. ಅಶ್ವಿನಿ ಪದ್ಧಿ ಸ್ವಾಗತಿಸಿದರು. ಸಾಕ್ಷಿ ಕರಡಿ ಹಾಗೂ ವರ್ಷಾ ಕಂಬಾರ ನಿರೂಪಿಸಿದರು. ಪವಿತ್ರಾ ಶಿಂಧೆ ವಂದಿಸಿದರು.