

ಕುಂದಾಪುರ: ವಿದ್ಯಾರ್ಥಿಗಳಾದ ನೀವು ಭವ್ಯ ಭಾರತದ ಮುಂದಿನ ಸಂರಕ್ಷಕರು. 17ನೇ ವಯಸ್ಸಿನಲ್ಲೇ ಸೈನ್ಯಕ್ಕೆ ಸೇರಲು ಪ್ರಯತ್ನಿಸಬೇಕು. ಸರಿಯಾದ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸಲು ನಿರಂತರ ಪ್ರಯತ್ನಶೀಲರಾಗಿರಬೇಕು. ದೇಶದ ಪ್ರತಿಯೊಬ್ಬರನ್ನೂ ಸಹೋದರರಂತೆ ಗೌರವದಿಂದ ನೋಡಬೇಕು ಎಂದು ಕ್ಷಿಪ್ರ ಕಾರ್ಯಾಚರಣಾ ಪಡೆಯ (ಆರ್ಎಎ್) ಭದ್ರಾವತಿಯ ಸಹಾಯಕ ಕವಾಂಡೆಂಟ್ ಅನಿಲ್ ಕುವಾರ್ ಜಾಧವ್ ಹೇಳಿದರು.
ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಕಾರ್ಯದರ್ಶಿ ಮತ್ತು ಶಾಲೆ ಪ್ರಾಂಶುಪಾಲ ಶರಣಕುವಾರ, ಇನ್ಸ್ಪೆಕ್ಟರ್ ಜಿ.ಮನೋಹರ್, ಎಸ್ಐ ಮುನಿಯಪ್ಪ, ಎಸ್ಐ ದಿನೇಶ್ ಎಂ.ಪಿ., ಎಸ್ಐ ನಳಿನಿ ಕುವಾರಿ, ಸಾಗರ್ ಬಿಜಾಪುರೆ, ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ. ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ರಾಮ ದೇವಾಡಿಗ ನಿರೂಪಿಸಿ ವಂದಿಸಿದರು.