

ವಿಜಯಪುರ : ವಿದ್ಯಾರ್ಥಿಗಳು ನೈತಿಕತೆ, ಬದ್ಧತೆ ಮತ್ತು ಉತ್ಸಾಹದಿಂದ ಶ್ರಮ ವಹಿಸಿದರೆ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕೆಬಿಜೆಎನ್‌ಎಲ್ ಕಾನೂನು ಸಲಹೆಗಾರ್ತಿ ಡಾ. ರಂಜಿತಾ ಕೆ.ಆರ್. ಮಾತನಾಡಿ, ನರ್ಸಿಂಗ್ ಸೇವೆಯ ಮಾನವೀಯತೆಯನ್ನು ಜೀವಂತವಾಗಿಡುವ ಶ್ರೇಷ್ಠ ವೃತ್ತಿಯಾಗಿದೆ ಎಂದರು.
ವಿವಿಧ ವಿಭಾಗದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ, ಬೆಂಗಳೂರಿನ ಎಂ.ಎಸ್. ರಾಮಯ್ಯ ನರ್ಸಿಂಗ್ ಕಾಲೇಜು ಮತ್ತು ಸಂಶೋಧನೆ ಕೇಂದ್ರದ ಡೀನ್ ಡಾ. ಸೋನಾಲಿ ಜಾಧವ, ಬಾಪು ಖೋದ್ನಾಪುರ, ಡಾ. ಸುಚಿತ್ರಾ ರಾಟಿ, ಡಾ. ಕವಿತಾ ಕೆ., ಡಾ. ಬಸೀರ್ ಅಹ್ಮದ್, ಡಾ. ಶ್ವೇತಾ, ಡಾ. ಸಂಕಪ್ಪ, ಡಾ. ಅಮಿತಕುಮಾರ, ಡಾ. ಅಪ್ಪನಗೌಡ, ನಜೀರ್ ಬಳಗಾರ, ಲಕ್ಷ್ಮೀ ಅಗ್ನಿಹೊತ್ರಿ, ಸೌಜನ್ಯ ಪೂಜಾರ, ಮಂಜುನಾಥ ಪಾಟೀಲ, ಅನಿಲ ಪಡಗಾನೂರ, ಕಿರಣ ಶಿರೋಳ್ಕರ ಮತ್ತಿತರರಿದ್ದರು.
ಡಾ. ಅಮರನಾಥ ಷಣ್ಮುಗೆ ಸ್ವಾಗತಿಸಿದರು. ಡಾ. ಸತೀಶ ನಡಗಡ್ಡಿ ಮತ್ತು ಗುರುರಾಜ ಗುಗ್ಗರಿ ಪರಿಚಯಿಸಿದರು. ಡಾ. ಜಯಶ್ರೀ ಪೂಜಾರಿ ವಂದಿಸಿದರು.