ಸಹಕಾರಿ ಬೆಳವಣಿಗೆಗೆ ಸತತ ಪರಿಶ್ರಮ ಅಗತ್ಯ

Continuous effort is required for cooperative growth.
Continuous effort is required for cooperative growth.
Published on

ಇಳಕಲ್ಲ (ಗ್ರಾ): ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಿ ಉನ್ನತಮಟ್ಟಕ್ಕೆ ಬೆಳೆಯಬೇಕಾದರೆ ಸಂಸ್ಥೆಯಲ್ಲಿರುವ ಪ್ರತಿಯೊಬ್ಬರೂ ಪರಿಶ್ರಮ ಹಾಕಬೇಕು ಎಂದು ಮಾಜಿ ಸಚಿವ, ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಬಾಪೂಜಿ ಪತ್ತಿನ ಸಹಕಾರಿ ಸಂಘದ 80ನೇ ಶಾಖೆ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರ ಆರ್ಥಿಕ ಅನುಕೂಲಕ್ಕೆ ಹೆಚ್ಚೆಚ್ಚು ಶಾಖೆಗಳನ್ನು ಗ್ರಾಮೀಣ ಭಾಗಗಲ್ಲಿ ತೆರೆಯುತ್ತಿದ್ದೇವೆ ಎಂದರು.

ಸಜ್ಜಲಗುಡ್ಡ -ಕಂಬಳಿಹಾಳ ಮಠದ ದೊಡ್ಡಬಸವಾರ್ಯ ತಾತನವರು, ಹಾಗೂ ನಂದವಾಡಗಿ ಶ್ರೀ ಮಠದ ಡಾ.ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಕಂದಗಲ್ಲ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಚನ್ನಪ್ಪಗೌಡ ನಾಡಗೌಡ್ರ, ಪರತಗೌಡ ಪಾಟೀಲ, ಸಂಸ್ಥೆಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎಸ್.ಸಿ. ಮೋಟಗಿ ಮಾತನಾಡಿದರು.

ಶಶಿಧರ ನಾಡಗೌಡ್ರ, ಮಹಾಂತೇಶ ಕಡಿವಾಲ, ಬಸ್ಸೇಟ್ಟೆಪ್ಪ ಸಜ್ಜನ, ಅಮೀರ ಹಮಜಾಸಾಹೇಬ ಭಾವಿಕಟ್ಟಿ, ಕೋನಪ್ಪ ನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಅಳ್ಳೊಳ್ಳಿ, ಯುವ ಮುಖಂಡ ಶಿವಪ್ಪ ಭಜಂತ್ರಿ, ಮಾಜಿ ಸೈನಿಕ ರಾಮನಗೌಡ ಬೆಳ್ಳಿಹಾಳ, ಬಸವೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಅಮಾತೆಪ್ಪ ಯರದಾಳ, ಗ್ರಾಪಂಚಾಯಿತಿ ಸದಸ್ಯ ರೆಹಮಾನಸಾಬ ಬಾಗವಾನ, ಸಂಗಣ್ಣ ಹವಾಲ್ದಾರ, ಎಂ.ಎಸ್. ಪಾಟೀಲ, ಎ.ಎಸ್. ನಾಗಲೋಟಿ, ಸುರೇಶ ತಳವಾರ, ಸ್ಥಳೀಯ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಶರಣಪ್ಪಗೌಡ ಸಣ್ಣಅಯ್ಯನಗೌಡ್ರ, ಬಸಪ್ಪ ವಿಟ್ಲಾಪುರ, ಶರಣಯ್ಯ ಮಠ, ವೀರೇಶ ಪಾಟೀಲ್, ಚಂದ್ರಶೇಖರಯ್ಯ ಗುರುವಿನಮಠ, ಹಣಮಂತಗೌಡ ದಾದ್ಮಿ, ಚನ್ನಪ್ಪ ಜಾಲಿಹಾಳ, ಶ್ರೀನಿವಾಸ ಕುಲಕರ್ಣಿ, ಗ್ಯಾನಪ್ಪ ಹುತಗಣ್ಣನವರ, ಮಲ್ಲಿಕಾರ್ಜುನ ಪೋತನಾಳ, ಮಂಜುನಾಥ ಪೂಜಾರಿ, ಕಂದಗಲ್ಲ ಶಾಖೆಯ ವ್ಯವಸ್ಥಾಪಕ ಮಹಾಂತೇಶ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net