ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅವಿರತ ಶ್ರಮ

12 GVT 06
ಗಂಗಾವತಿ ಐತಿಹಾಸಿಕ ಪ್ರಸಿದ್ಧ ಕಲ್ಮಠದ ಪೀಠಾಧಿಪತಿ ಡಾ.ಕೊಟ್ಟೂರುಸ್ವಾಮಿಜೀಗಳ 30ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಹಿನ್ನೆಲೆಯಲ್ಲಿ ಕಲ್ಮಠದಲ್ಲಿ ಶ್ರೀಗಳನ್ನು ಭಕ್ತ ಸಮೂಹದಿಂದ ಸೋಮವಾರ ಸನ್ಮಾನಿಸಲಾಯಿತು. ಮಾಜಿ ಶಾಸಕ ಜಿ.ವೀರಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ,ಕಾರ್ಯದರ್ಶಿ ಶರಣೇಗೌಡ ಮಾ.ಪಾಟೀಲ್ ಇತರರಿದ್ದರು.
Published on

ಗಂಗಾವತಿ: ನಗರದ ಐತಿಹಾಸಿಕ ಪ್ರಸಿದ್ಧ ಕಲ್ಮಠದ ಪೀಠಾಧಿಪತಿ ಡಾ.ಕೊಟ್ಟೂರುಸ್ವಾಮಿಜೀಗಳ 30ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಹಿನ್ನೆಲೆಯಲ್ಲಿ ಕಲ್ಮಠದಲ್ಲಿ ವಿಶೇಷ ಕಾರ್ಯಕ್ರಮ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಕಲ್ಮಠದ 9ನೇ ಪೀಠಾಧಿಪತಿಗಳಾಗಿದ್ದು, ಶ್ರೀಮಠದ ಅಧಿಕಾರ ಸ್ವೀಕರಿಸಿದ ಡಾ.ಕೊಟ್ಟೂರುಸ್ವಾಮೀಜಿಗಳ ಶ್ರಮದಿಂದ 18ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಆರಂಭವಾಗಿವೆ. ಪಟ್ಟಾಧಿಕಾರ ಮಹೋತ್ಸವ ಹಿನ್ನೆಲೆಯಲ್ಲಿ ಭಕ್ತ ವೃಂದದಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಶ್ರೀಗಳನ್ನು ಸನ್ಮಾನಿಸಲಾಯಿತು.

ಕೆಸಿಎಸ್ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ನರ್ಸರಿಯಿಂದ ಸ್ನಾತಕೋತ್ತರ ಪದವಿವರೆಗೂ ಶಿಕ್ಷಣ ಸಂಸ್ಥೆಗಳನ್ನು ಶ್ರೀಗಳು ಆರಂಭಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅವಿರತ ಶ್ರಮಿಸುತ್ತಿದ್ದಾರೆ ಎಂದರು.

ಸುಳೇಕಲ್ ಬೃಹನ್ಮಠದ ಭುವನೇಶ್ವರಯ್ಯ ಸ್ವಾಮೀಜಿ, ಗಡ್ಡಿ ಸದ್ಧರ್ಮ ಪೀಠದ ಸಂಗಮೇಶ ಅಪ್ಪಾಜಿ, ಟಿಎಪಿಸಿಎಂಎಸ್ ನಿರ್ದೇಶಕ ಜೋಗದ ನಾರಾಯಣಪ್ಪ ನಾಯಕ, ಸದಸ್ಯರಾದ ಸುರೇಶ ಸಿಂಗನಾಳ, ವಿವಿಧ ಸಮಾಜದ ಮುಖಂಡರಾದ ಬಸವರಾಜ ಸ್ವಾಮಿ ಮಳೀಮಠ, ನಾರಾಯಣರಾವ್ ವೈದ್ಯ, ರಾಘವೇಂದ್ರ ಮೇಗೂರು, ಯಮನೂರಪ್ಪ ಹುಲಿಗಿ, ಕೆ.ವೆಂಕಟೇಶ, ಪ್ರಕಾಶ ಅಕ್ಕಿ, ನಾಗರಾಜ ಈಡಿಗ, ಪ್ರೊ.ಬಸವರಾಜ ಅಯೋಧ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net