ಸಮಾಜದ ಶ್ರೇಯೋಭಿವೃದ್ಧಿಗಾಗಿ ನಿರಂತರ ಶ್ರಮ

23Anand2
ಲಿಂಗಾಯತ ಮಹಿಳಾ ಸಮಾಜ ಮತ್ತು ಕನ್ನಡ ಭವನದ ಸಂಯುಕ್ತಾಶ್ರಯದಲ್ಲಿ ಲಿಂಗಾಯತ ಮಹಿಳಾ ಸಮಾಜ ವಾರ್ಷಿಕೋತ್ಸವದಲ್ಲಿ ನೂತನ ಸಮಿತಿಯ ಪದಗ್ರಹಣ ಸಮಾರಂಭ ಜರುಗಿತು. ಸುನೀತಾ ಪಾಟೀಲ, ಮಧುಮತಿ ಹಿರೇಮಠ, ಶಾರದಾ ಪಾಟೀಲ ಇತರರಿದ್ದರು.
Published on

ಬೆಳಗಾವಿ: ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ನಿರಂತರ ಕೆಲಸ ಮಾಡಲಾಗುವುದು ಎಂದು ಲಿಂಗಾಯತ ಮಹಿಳಾ ಸಮಾಜದ ನೂತನ ಅಧ್ಯಕ್ಷೆ ಮಧುಮತಿ ಹಿರೇಮಠ ಹೇಳಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಲಿಂಗಾಯತ ಮಹಿಳಾ ಸಮಾಜ ಮತ್ತು ಕನ್ನಡ ಭವನದ ಸಂಯುಕ್ತಾಶ್ರಯದಲ್ಲಿ ಲಿಂಗಾಯತ ಮಹಿಳಾ ಸಮಾಜದ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಹಲವು ಕಾರ್ಯಕ್ರಮ ಹಾಗೂ ನೂತನ ಸಮಿತಿ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಸ್ಥಾಪಕ ಗೌರವಾಧ್ಯಕ್ಷೆ ಶೈಲಜಾ ಭಿಂಗೆ ಮಾತನಾಡಿ, ಲಿಂಗಾಯತ ಮಹಿಳಾ ಸಮಾಜ 31 ವಷರ್ಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಸಮಾಜಕ್ಕೆ ಉಪಯುಕ್ತವಾಗುವ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಕೊಂಡು ನಾಡು, ನುಡಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಲಿಂಗಾಯತ ಮಹಿಳಾ ಸಮಾಜದ ನೂತನ ಅಧ್ಯಕ್ಷರಾಗಿ ಮಧುಮತಿ ಹಿರೇಮಠ, ಕಾರ್ಯದರ್ಶಿಯಾಗಿ ರಕ್ಷಾ ನೇಗಿನಾಳ ಹಾಗೂ 18 ಜನ ಸಮಿತಿ ಸದಸ್ಯರು ಪದಗ್ರಹಣ ಮಾಡಿದರು. ಸುನೀತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಾರದಾ ಪಾಟೀಲ, ಗೌರವ ಸಮಿತಿ ರತ್ನಪ್ರಭಾ ಬೆಲ್ಲದ, ಖಜಾಂಚಿ ಶೋಭಾ ಪಾಟೀಲ, ಶೈಲಾ ಪಾಟೀಲ, ವಿದ್ಯಾ ಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net