ಸ್ಪರ್ಧಾತ್ಮಕ ಪರೀಕ್ಷೆಗೆ ನಿರಂತರ ಪ್ರಯತ್ನ: ಡಾ.ಉಜ್ವಲ್​ ಸಲಹೆ

Sul_competitive
Published on

ಸುಳ್ಯ: ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶಸ್ಸು ಸಾಧಿಸಬೇಕಾದರೆ ನಿರಂತರ ಪ್ರಯತ್ನ ಅತ್ಯಗತ್ಯ ಎಂದು ಕೆವಿಜಿ ಅಮರಜ್ಯೋತಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್​ ಹೇಳಿದರು.

ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ನಡೆದ ಯುಪಿಎಸ್​ಸಿ ಹಾಗೂ ಐಬಿಪಿಎಸ್​ ಓರಿಯೆಂಟೇಷನ್​ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಸರ್ವ ಅಕಾಡೆಮಿಯ ನಿರ್ದೇಶಕ ಸುರೇಶ್​, ಸ್ಪರ್ಧಾತ್ಮಕ ಪರೀೆಯ ತಯಾರಿ, ನಿರಂತರ ಅಭ್ಯಾಸದ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಮ್ಯಾನೇಜಿಂಗ್​ ಟ್ರಸ್ಟಿ ಡಾ.ರೇಣುಕಾ ಪ್ರಸಾದ್​ ಕೆ.ವಿ, ಟ್ರಸ್ಟಿ ಡಾ.ಜ್ಯೋತಿ ಆರ್​.ಪ್ರಸಾದ್​, ಪ್ರಾಂಶುಪಾಲೆ ಡಾ.ಯಶೋದಾ ರಾಮಚಂದ್ರ ಶುಭ ಹಾರೈಸಿದರು. ನಿತಿನ್​ ತೋಮಸ್​ ಸ್ವಾಗತಿಸಿದರು. ಸಾನಿಕಾ ರೈ ವಂದಿಸಿದರು. ವಿದ್ಯಾರ್ಥಿನಿ ಪ್ರತಿಜ್ಞಾ ಬಿ.ಎಂ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net