ಸಂಘಟನೆ ಬಲಿಷ್ಠವಾದಾಗ ಸಮುದಾಯ ಅಭಿವೃದ್ಧಿ

Continuous development when organization is strong
Published on

ಮಡಿಕೇರಿ:

ಒಂದು ಸಮಾಜದ ಸಂಘ ಬಲಿಷ್ಠವಾದಾಗ ಆ ಸಮಾಜವು ಅಭಿವೃದ್ಧಿ ಹೊಂದುತ್ತದೆ. ಎಲ್ಲರೂ
ಜೊತೆಗೂಡಿ ನಡೆದಾಗ ಸಮಾಜ ಇನ್ನಷ್ಟು ಬೆಳಗುತ್ತದೆ ಎಂದು ಜಿಲ್ಲಾ ಕುಂಬಾರ ಕುಲಾಲ ಸಂಘದ ಗೌರವ ಅಧ್ಯಕ್ಷ ಎಂ.ಡಿ. ನಾಣಯ್ಯ ಹೇಳಿದರು. ಮಡಿಕೇರಿಯಲ್ಲಿ ಇತ್ತೀಚೆಗೆ ನಡೆದ ಸಂಘದ ಕಾರ್ಯಕಾರಿ ಮಂಡಳಿ ಆಯ್ಕೆ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾ ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷೆ ಮುತ್ತಮ್ಮ ಕೋಟಿ ಹಲವಾರು ವರ್ಷ ಸಂಘಕ್ಕೆ ಪ್ರಾಮಾಣಿಕವಾಗಿ ಸೇವೆ ಮಾಡಿದ್ದಾರೆ. ಇದೇ ಆದರ್ಶವಾಗಿಟ್ಟುಕೊಂಡು ಹೊಸ ಸಮಿತಿ ಕಾರ್ಯಪ್ರವೃತ್ತವಾಗಲಿ. ಕುಲಾಲ ಕುಂಬಾರ ಸಮಾಜವನ್ನು ಇನ್ನಷ್ಟು ಬಲಿಷ್ಠ ಗೊಳಿಸಲು ಹೊಸ ಸಮಿತಿ ಕಟಿಬದ್ಧವಾಗಲಿ ಎಂದರು.

ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ಗೌರವ ಸಲಹೆಗಾರ ಉದ್ಯಮಿ ದಾಮೋದರ್ ಮಾತನಾಡಿ ಅವರು ಎಲ್ಲರೂ ಒಮ್ಮಸ್ಸಿನಿಂದ ಒಗ್ಗೂಡಿದಾಗ ಸಮಾಜ ಬೆಳೆಯಲು ಸಾಧ್ಯ. ಆ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯವನ್ನು ಇನ್ನಿತರ ವ್ಯವಸ್ಥೆಗಳನ್ನು ಪೂರೈಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ಇನ್ನೊಬ್ಬ ಗೌರವ ಸಲಹೆಗಾರ ಕುಶಾಲಪ್ಪ ಕುಶಾಲನಗರ ಮಾತನಾಡಿ ಕುಲಬಾಂಧವರೆಲ್ಲ ಸಂಘದ ವತಿಯಿಂದ ನಡೆಯುವ ವಾರ್ಷಿಕ ಮಹಾಸಭೆಗೆ ತಮ್ಮ ಸಂಸಾರದೊAದಿಗೆ ಹಾಜರಾಗಿ ಮುಂದೆ ನಡೆಯುವ ಕ್ರೀಡಾಕೂಟ ಮತ್ತು ಇತರ ಮನೋರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸದಸ್ಯ ದಿನೇಶ್ ಐಗೂರು, ಚಂದ್ರಶೇಖರ್, ಅರುಣ್ ಕುಲಾಲ್, ಕೂಡಿಗೆ, ಅಶ್ವತ್ ಮಡಿಕೆಬೀಡು, ಚಂದ್ರಶೇಖರ್ ಮೂರ್ನಾಡು ಮಾತನಾಡಿದರು.

ನಂತರ ಕುಲಾಲ ಕುಂಬಾರ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಶೇ. 75ಕ್ಕಿಂತಲೂ ಹೆಚ್ಚು ಅಂಕ ತೆಗೆದ ಮಕ್ಕಳಿಗೆ ಸಹಾಯಧನ ವಿತರಿಸಲಾಯಿತು.
ಕುಲಬಾಂಧವರಿಗೆ ಆಪತ್ಕಾಲದಲ್ಲಿ ನೆರವಾದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ಗೌರವ ಸಲಹೆಗಾರ ಉದ್ಯಮಿ ದಾಮೋದರ್ ಅವರನ್ನು ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸ್ಥಾಪಕ ಅಧ್ಯಕ್ಷೆ ಮುತ್ತಮ್ಮ ಕೋಟಿ, ಗೌರವಾಧ್ಯಕ್ಷರಾಗಿ ಎಂ.ಡಿ. ನಾಣಯ್ಯ, ಸಂಘದ ಜಿಲ್ಲಾ ಅಧ್ಯಕ್ಷರಾಗಿ ಕುಶಾಲಪ್ಪ ಕುಶಾಲನಗರ, ಉಪಾಧ್ಯಕ್ಷರಾಗಿ ದಾಮೋದರ್, ಕಾರ್ಯದರ್ಶಿಯಾಗಿ ಅರುಣ್ ಕುಲಾಲ್ ಕೂಡಿಗೆ, ಖಜಾಂಜಿಯಾಗಿ ಗಿರೀಶ್ ಮಡಿಕೆಬೀಡು,ಸಮಿತಿ ಸದಸ್ಯರಾಗಿ ದಿನೇಶ್ ಐಗೂರು ಅಶ್ವತ್ ಮಡಿಕೆಬೀಡು, ಸುರೇಶ್ ಮಡಿಕೇರಿ, ಅಪ್ಪಾಜಿ ಕುಶಾಲನಗರ, ನಾರಾಯಣ ಚೇರಂಬಾಣೆ, ಪುರುಷೋತ್ತಮ್ ಹೆಮ್ಮಾಡ್, ಅಚ್ಚು ಐಗೂರು, ವಿಠಲ, ಕಾಂತಿಮಣಿ ಮಡಿಕೇರಿ, ಸರಸ್ವತಿ ಬೆಟ್ಟಗೇರಿ ಇವರುಗಳನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net