

ಸವದತ್ತಿ: ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಜತೆಗೆ ಶಿಕರ ಮಾರ್ಗದರ್ಶನದಲ್ಲಿ ಮುನ್ನುಗ್ಗಿದರೆ ಯಶಸ್ಸು ನಿಶ್ಚಿತ ಎಂದು ಕವಿ ನಾಗೇಶ ನಾಯಕ ಹೇಳಿದರು. ಪಟ್ಟಣದ ಕೆಎಲ್ಇ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಹುದುಗಿರುವ ಪ್ರತಿಭೆ ಅನಾವರಣಗೊಳಿಸಲು ಸಾಂಸತಿಕ ಚಟುವಟಿಕೆಗಳು ಸೂಕ್ತ ವೇದಿಕೆಯಾಗಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು. ಮಾನವೀಯ ಮೌಲ್ಯ ಅಳವಡಿಸಿಕೊಂಡು ಬದುಕಿನ ಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿ ಮಾದರಿ ಜೀವನ ನಡೆಸಬೇಕು ಎಂದು ತಿಳಿಸಿದರು.
ಸ್ಥಾನಿಕ ಆಡಳಿತ ಮಂಡಳಿ ಅಧ್ಯ ಜಿ.ಎಸ್.ಶಿಂತ್ರಿ ಮಾತನಾಡಿ, ಸಂಸ್ಥೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಶಿಕರು ಶ್ರಮಿಸಬೇಕು ಎಂದರು.ಅತಿಥಿ ಶಿಕರಾದ ಭಾರತಿ ಏಗನಗೌಡ್ರ ಅವರನ್ನು ಸನ್ಮಾನಿಸಲಾಯಿತು. ವಿ.ಆರ್.ರಾಠೋಡ, ಎಸ್.ವೈ.ಗುರಿಕಾರ, ಎಸ್.ಎಂ.ಲಟ್ಟಿ, ಬಿ.ಡಿ.ತುಬಾಕಿ,
ಎಸ್.ವಿ.ಅಂಗಡಿ, ಬಸವರಾಜ ಗಡೇಕಾರ ಇತರರಿದ್ದರು. ಉಪಪ್ರಾಚಾರ್ಯ ಎಸ್.ಎಸ್.ಪಾಟೀಲ ಸ್ವಾಗತಿಸಿದರು. ಎಂ ಜಿ.ಲಮಾಣಿ ವಂದಿಸಿದರು. ಎಸ್.ಸಿ.ಉಳ್ಳಿಗೇರಿ, ಎಸ್.ಬಿ.ಅಂಗಡಿ ನಿರೂಪಿಸಿದರು.