ಕ್ರೀಡಾಸಕ್ತರಿಗೆ ನಿರಂತರ ಬೆಂಬಲ

2kudachi1
Published on

ಕುಡಚಿ: ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ವ್ಯಾಸಂಗದ ಜತೆ ಕ್ರೀಡಾಕೂಟಗಳಲ್ಲಿಯೂ ಸಾಧನೆ ಮಾಡುತ್ತಿರುವುದು ಹೆಮ್ಮ ವಿಷಯ ಎಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಶಿಕ್ಷಣ ಸಂಸ್ಥೆ ನಿರ್ದೇಶಕ ಅಮಿತ ಘಾಟಗೆ ಹೇಳಿದರು.

ತಾಳಿಕೋಟಿ ಪಟ್ಟಣದ ಎಸ್.ಕೆ.ಕಾಲೇಜಿನಲ್ಲಿ ಈಚೆಗೆ ನಡೆದ ೨೦೨೪-೨೫ ನೇ ಸಾಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪುರುಷ ಮತ್ತು ಮಹಿಳೆಯರ ಏಕವಲಯ ಕುಸ್ತಿ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಕುಡಚಿ ಪಟ್ಟಣದ ಡಾ.ಬಾಬಾಸಾಹೇಬ ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಬಿ.ಶಂಕರಾನಂದ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ಸತತ ೧೧ನೇ ಬಾರಿ ಪ್ರಿಸ್ಟೈಲ್ ಕುಸ್ತಿ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಹಿನ್ನೆಲೆಯಲ್ಲಿ ಭಾನುವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಕುಸ್ತಿಪಟುಗಳ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡಾಸಕ್ತ ವಿದ್ಯಾರ್ಥಿಗಳಿಗೆ ನಮ್ಮ ಶಿಕ್ಷಣ ಸಂಸ್ಥೆ ನಿರಂತರ ಬೆಂಬಲ ನೀಡಲಿದೆ ಎಂದರು.

ಪ್ರಾಚಾರ್ಯ ಎ.ಎಸ್.ಕಾಂಬಳೆ ಮಾತನಾಡಿದರು. ಸದಾಶಿವ ನಲವಾಡೆ, ಮಲ್ಲೇಶ ಮೇತ್ರೆ, ಬಾಪುಸಾಹೇಬ ಶಿಂಧೆ, ಮಂಜುನಾಥ ಜಿಡ್ಡಿಮನಿ ಅನುಕ್ರಮವಾಗಿ ೮೬, ೯೨, ೬೩ ಕೆಜಿ ವಿಭಾಗದಲ್ಲಿ ಕುಸ್ತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇರ್ಫಾನ್ ಜಿಡ್ಡಿಮನಿ, ಸಾಗರ ಲೋಕಾಪೂರ, ಮಹಾಂತೇಶ ಮೇತ್ರೆ ಅನುಕ್ರಮವಾಗಿ ೭೦, ೮೨, ೬೧ ಕೆಜಿ ವಿಭಾಗದ ಕುಸ್ತಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಆರ್.ಎಂ.ಮಹೇಶವಾಡಗಿ ಮಾರ್ಗದರ್ಶನ ನೀಡಿದ್ದರು.

ಅಣ್ಣಾಸಾಬ ಠೊಣ್ಣೆ, ಪರ್ಜಿತ್ ರೇಡಕರ, ಅಪ್ತಾಬ್ ಪಿನಿತೋಡ, ಎಸ್.ಎಸ್.ಕೊಕಟನೂರ, ಡಾ.ಎಸ್.ಎ.ಬೆಳಗಲಿ, ಡಾ.ಎಂ.ಐ.ಜರ್ಮನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net