ಗ್ರಾ.ಪಂ ಘೋಷಣೆಗಾಗಿ ಮುಂದುವರಿದ ಜಿಗಳೂರ ಗ್ರಾಮಸ್ಥರ ಹೋರಾಟ

22 RON 4
ರೋಣ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿಂದು ಜಿಗಳೂರ ಗ್ರಾಮಕ್ಕೆ ಗ್ರಾಮ ಪಂಚಾಯತ ಕೇಂದ್ರ ಸ್ಥಾನವನ್ನು ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರಿಂದ ಪ್ರತಿಭಟನೆ
Published on

ರೋಣ: ಜಿಗಳೂರ ಗ್ರಾಮಕ್ಕೆ ಗ್ರಾಮ ಪಂಚಾಯಿತಿ ಸ್ಥಾನ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರ ಉಪವಾಸ ಸತ್ಯಾಗ್ರಹ ಗುರುವಾರ
ಮೂರನೇ ದಿನ ಪೂರೈಸಿತು.

ಗ್ರಾಮದ ಮುಖಂಡರಾದ ಬಾಬುಗೌಡ ಪಾಟೀಲ ಮಾತನಾಡಿ, ಹೈಕೋರ್ಟ್ ನೀಡಿದ ಆದೇಶ ಮೀರಿ ಹೊಸಳ್ಳಿ ಗ್ರಾಮ ಪಂಚಾಯತಿಗೆ ಕೇಂದ್ರ ಸ್ಥಾನವನ್ನು ನೀಡಿ, ಜಿಗಳೂರ ಗ್ರಾಮಕ್ಕೆ ಅನ್ಯಾಯ ಮಾಡಲಾಗಿದೆ. ಜಿಲ್ಲಾಧಿಕಾರಿ ನ್ಯಾಯ ಒದಗಿಸದಿದ್ದರೆ ಗ್ರಾಮ ಪಂಚಾಯಿತಿ ಸದಸ್ಯರು ರಾಜೀನಾಮೆ ನೀಡುವುದರ ಜತೆಗೆ ಜಿಲ್ಲಾಡಳಿತದ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಜಿಗಳೂರ ಗ್ರಾಮ ಪಂಚಾಯಿತಿ, ಮುಖಂಡರು ಹಾಗೂ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net