2ಎ ಮೀಸಲಾತಿಗೆ ನಿರಂತರ ಹೋರಾಟ

12-nvl-1 SWAMIJI
Published on

ನವಲಗುಂದ: ಸಮುದಾಯದ 2ಎ ಮೀಸಲಾತಿ ಹೋರಾಟದ ಸ್ಪೂರ್ತಿಗೆ ನವಲಗುಂದ ತಾಲೂಕು ಮುಖ್ಯ ಕಾರಣ ಎಂದು ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಕರೆದಿದ್ದ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಅ. 13ರಂದು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿಯ ಗಬ್ಬೂರ ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಹೋರಾಟ ಮಾಡಲಾಗುವುದು ಎಂದರು. 2024ರ ಲೋಕಸಭೆ ಚುನಾವಣೆ ಒಳಗಾಗಿ ನಮಗೆ ಮೀಸಲಾತಿ ಕೊಡಬೇಕು. 2ಎ ಮೀಸಲಾತಿಗೆ ಕಾನೂನು ತೊಡಕು ಎದುರಾದರೆ ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಶಿಫಾರಸು ಮಾಡಲು ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಹೋರಾಟ ಮಾಡಲಾಗುವುದು ಎಂದರು.

ನವಲಗುಂದ ತಾಲೂಕು ಸಮುದಾಯದ ಮಹಿಳಾ ಘಟಕದ ಅಧ್ಯಕ್ಷರಾಗಿ ವಿನೋದಾ ಬಸವರಾಜ ನಾಗರಳ್ಳಿ ಅವರನ್ನು ನೇಮಿಸಲಾಯಿತು.

ನಿಂಗಣ್ಣ ಕರಿಕಟ್ಟಿ, ಬಾಪುಗೌಡ ಪಾಟೀಲ, ಎಲ್.ಬಿ. ಪಾಟೀಲ, ಮಲ್ಲಪ್ಪ ಕಿರೇಸೂರ, ಶಂಕರಗೌಡ ಪಾಟೀಲ, ನಾಗನಗೌಡ ಪಾಟೀಲ, ರಾಯನಗೌಡ ಪಾಟೀಲ, ಸದುಗೌಡ ಪಾಟೀಲ, ವೈ.ಬಿ. ಕುರಹಟ್ಟಿ, ಸಿದ್ದನಗೌಡ ಪಾಟೀಲ, ಸುರೇಶ ಕಮ್ಮಾರ, ಪ್ರದೀಪ ಪಾಟೀಲ, ಮಲ್ಲಿಕಾರ್ಜುನ ಆರೇಗೌಪ್ಪ , ದೇವರಾಜ ಕರಿಯಪ್ಪನವರ, ಮುತ್ತಣ್ಣ ಮನಮಿ, ಈರಣ್ಣ ಚವಡಿ, ಸಂತೋಷ ನಾವಳ್ಳಿ, ಕೆ.ಬಿ. ಮದ್ನೂರ, ಎಂ.ಎಸ್. ಕೊಪ್ಪದ, ಸಿದ್ದಲಿಂಗಪ್ಪ ಮದ್ನೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net