ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಮುಂದುವರಿದ ಧರಣಿ

17
Published on

ಮೈಸೂರು:ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಕಾವೇರಿ ಕ್ರಿಯಾ ಸಮಿತಿಯಿಂದ 61ನೇ ದಿನದ ಪ್ರತಿಭಟನೆ ಧರಣಿ ಮುಂದುವರಿಯಿತು.
ನಗರದ ಅರಮನೆ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಬಳಿ ಶನಿವಾರ ಧರಣಿ ನಡೆಸಿದ ಪ್ರತಿಭಟನಾಕಾರರು, ಕಾವೇರಿ ನೀರನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳುವ ದುರುದ್ದೇಶದಿಂದ ತಮಿಳುನಾಡು ಗುಟ್ಟಾಗಿ ಕಾವೇರಿ ನದಿ, ಗುಂಡಾರ್ ನದಿ ಮತ್ತು ಒಯ್ದೈ ನದಿಗಳ ಜೋಡಣೆ ಮಾಡಲು ಈಗಾಗಲೇ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಂಡು ಈ ಯೋಜನೆ ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ. ಆದ್ದರಿಂದ ಈ ಕೂಡಲೇ ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಿ ಆ ಯೋಜನೆ ತಡೆಯಬೇಕು ಎಂದು ಒತ್ತಾಯಿಸಿದರು.
ನಮ್ಮ ಮೇಕೆದಾಟು ಯೋಜನೆಗೆ ತಡೆಯೊಡ್ಡುತ್ತಿರುವ ತಮಿಳುನಾಡು ಮಾತ್ರ ಯಾವುದೇ ಅನುಮತಿ ಇಲ್ಲದೇ ನದಿ ಜೋಡಣೆ ಕಾರ್ಯದಲ್ಲಿ ತೊಡಗಿದೆ. ಹಾಗಾಗಿ ಮೇಕೆದಾಟು ಯೋಜನೆ ಸಂಪೂರ್ಣಗೊಂಡ ನಂತರ ಈ ವಿಚಾರವಾಗಿ ಸರ್ಕಾರ ಅನುಮತಿ ನೀಡಬಹುದು. ಅಲ್ಲಿವರೆಗೂ ತಮಿಳುನಾಡು ಸರ್ಕಾರ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ಕಾನೂನು ರೀತಿಯಲ್ಲಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ತಮಿಳುನಾಡು ಈ ಮೂರು ನದಿಗಳ ಜೋಡಣೆಯ ಏನು ಯೋಚನೆ ಇದೆ ಇದನ್ನು ಅವರು ಕಾರ್ಯರೂಪಕ್ಕೆ ತಂದರೆ ಕಾವೇರಿ ನ್ಯಾಯ ಮಂಡಳಿಯ ತೀರ್ಪನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಆದ ಕಾರಣ ತಕ್ಷಣ ಅವರ ಯೋಜನೆಯನ್ನು ತಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಮುಖಂಡರಾದ ಮೂಗೂರು ನಂಜುಂಡಸ್ವಾಮಿ, ಜಯಪ್ರಕಾಶ್, ರಾಜ್ಯ ರೈತ ಸಂಘದ ಸಿಂಧುವಳ್ಳಿ ಶಿವಕುಮಾರ್, ಪುಟ್ಟೇಗೌಡ ಬಸವರಾಜ್, ತೇಜಸ್ ಲೋಕೇಶ್‌ಗೌಡ, ಗಾಣಿಗನಕೊಪ್ಪಲು ನಾಗರಾಜು, ಕಾವೇರಿ ಕ್ರಿಯಾ ಸಮಿತಿಯ ಹೊನ್ನೇಗೌಡ, ತೇಜಸ್‌ಲೋಕೇಶ್‌ಗೌಡ, ಶಿವನಾಯ್ಕರ್, ಪೈಲ್ವಾನ್ ಬಾಲಾಜಿ, ಪೈಲ್ವಾನ್ ಬಲರಾಮ್, ಗೋಲ್ಡ್ ಸುರೇಶ್, ಕೆ ಮಂಜುಳಾ, ಪುಷ್ಪವತಿ, ಆರ್. ಮಂಜುಳಾ ,ಮಹೇಶ್‌ಗೌಡ, ರವೀಶ್, ನೇಹಾ,, ಆಟೋ ಮಹಾದೇವ, ಅಶೋಶ್, ಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net