

ವಿಜಯಪುರ: ನಗರದ ಮನಗೂಳಿ ಅಗಸಿ ಬಳಿಯ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು ಮಂಗಳವಾರ 15 ದಿನವನ್ನು ಪೂರೈಸಿತು.
ದಲಿತ ಮುಖಂಡ ಪರಶುರಾಮ ಸಿದರಡ್ಡಿ ಅವರು ಮಾತನಾಡಿ, ಕಳೆದ 15 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಇಡೀ ಬಡಾವಣೆಯ ದಲಿತ ಸಮುದಾಯ ಬೀದಿಯಲ್ಲಿ ನಿಂತು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಕೂಡ ಜಿಲ್ಲಾಡಳಿತ ಅಂಬೇಡ್ಕರ್ ಭವನ ಜಾಗದ ಸಮಸ್ಯೆ ಗಂಭೀರವಾಗಿ ಪರಿಗಣಿಸದೇ ದಿವ್ಯ ರ್ನಿಲಕ್ಷ ತೋರುತ್ತಿರುವುದು ಖಂಡನೀಯ.
ಕೂಡಲೇ ಜಿಲ್ಲಾಧಿಕಾರಿಯವರು ಜಾಗ ಮಂಜೂರು ಮಾಡಿ ಆದೇಶ ಪತ್ರ ನೀಡುವ ಮೂಲಕ ನೊಂದ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಸಂಟನೆ ಅಧ್ಯಕ್ಷ ಶ್ರೀಶೈಲ ಕಾಖಂಡಕಿ, ರವಿ ಕಾಖಂಡಕಿ, ಬಾಬು ಶಿವಶರಣ, ರಾಜು ಕಾಖಂಡಕಿ, ಪ್ರದಿಪ ಚಲವಾದಿ, ಬಸವರಾಜ ಕುಬಕಡ್ಡಿ, ಶೇಖು ಕೂಡಗಿ, ಸುನೀಲ ಕಾಖಂಡಕಿ, ಕೃಷ್ಣಾ ಚಲವಾದಿ, ಆಕಾಶ ಕಾಂಬಳೆ, ಸಚಿನ ಕಾಖಂಡಕಿ, ಪ್ರತಾಪ ಚಿಕ್ಕಲಕಿ, ಆಕಾಶ ಕಾಖಂಡಕಿ, ರೋಹಿತ ಮಲಕಣ್ಣವರ, ಸನ್ನಿ ಕಾಖಂಡಕಿ, ಪ್ರೀತಂ ಕಾಖಂಡಕಿ, ರಾಜರತನ ಕಾಂಬಳೆ, ಮುದುಕು ವಾಲಿಕಾರ ಮತ್ತಿತರರಿದ್ದರು.