ಮುಂದುವರಿದ ಮಳೆ ಆರ್ಭಟ

rain
Published on

ಶಿರಸಿ: ತಾಲೂಕಿನಾದ್ಯಂತ ವರುಣ ತನ್ನ ಆರ್ಭಟ ಮುಂದುವರೆಸಿದ್ದು, ಹಲವೆಡೆ ಕೆಲವು ಅವಾಂತರಗಳನ್ನು ಸೃಷ್ಟಿಸಿದ್ದಾನೆ.

ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗೀಬಿಸ್ ಹೇರೂರು ಮುಖ್ಯ ರಸ್ತೆ ಮರ್ಲಮನೆ ಬಸ್ ನಿಲ್ದಾಣದ ಹತ್ತಿರ ಸಿಡಿ ಕುಸಿದಿದೆ. ಕಳೆದ ಬೇಸಿಗೆಯಲ್ಲಿ ಈ ರಸ್ತೆ, ಸಿಡಿ ನಿರ್ಮಾಣ ಮಾಡಲಾಗಿತ್ತು. ರಸ್ತೆ ಪಕ್ಕ ಅನೇಕ ಕಡೆ ಮಣ್ಣು ಕುಸಿತವಾಗಿದೆ. ಈಗ ಸಿಡಿ ಕುಸಿತದಿಂದ ರಸ್ತೆ ಕುಸಿಯುವ ಸಾಧ್ಯತೆ ಇದ್ದು ಸಂಚಾರಕ್ಕೆ ಅಡಚಣೆ ಆಗಲಿದೆ.

ನೆಗ್ಗು ಗ್ರಾಮದ ಮಾದೇವಿ ಸುಧಾಕರ ಮಡಿವಾಳ ಮಂಜಪ್ಪನಮುರ್ಕಿ ಅವರ ಮನೆಯ ಅಡುಗೆ ಕೋಣೆಯ ಗೋಡೆ ಶಿಥಿಲಗೊಂಡಿದ್ದು, ಯಾವುದೇ ಜೀವ ಹಾನಿಯಾಗಿಲ್ಲ ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net