ಉಪೇಂದ್ರ ವಿರುದ್ಧ ಮುಂದುವರಿದ ಧರಣಿ

14kiran1
Published on


ಚಾಮರಾಜನಗರ : ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಚಿತ್ರ ನಟ ಉಪೇಂದ್ರರನ್ನು ಬಂಧಿಸುವಂತೆ ತಾಲೂಕು ಆದಿದ್ರಾವಿಡ ಮೂಲ ನಿವಾಸಿಗಳ ಹೋರಾಟ ಸಮಿತಿ ಕೊಳ್ಳೇಗಾಲ ಪಟ್ಟಣದ ತಾಲೂಕು ಕಚೇರಿ ಮುಂಭಾಗ ನಡೆಸುತ್ತಿರುವ ಧರಣಿ ಸತ್ಯಾಗ್ರಹ 18 ದಿನ ಪೂರೈಸಿದೆ.


ಹೊಂಡರಬಾಳು ಗ್ರಾಮದ ಯಜಮಾನರು ಹಾಗೂ ದಲಿತ ಸಂಘಟನೆಯ ಪದಾಧಿಕಾರಿಗಳು ಆದಿ ದ್ರಾವಿಡ ಮೂಲ ನಿವಾಸಿಗಳ ಹೋರಾಟ ಸಮಿತಿ ಧರಣಿಗೆ ಬೆಂಬಲಿಸಿ ಗುರುವಾರ ಕಪ್ಪು ಪಟ್ಟಿಧರಿಸಿ ಧರಣಿಯಲ್ಲಿ ಪಾಲ್ಗೊಂಡರು. ಉಪೇಂದ್ರನ ಮೇಲಿರುವ ತಡೆಯಾಜ್ಞೆಯನ್ನು ಹಿಂಪಡೆದು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.


ಹೊಂಡರಬಾಳು ಗ್ರಾಮದ ಯಜಮಾನ ಚನ್ನರಾಜು, ಗುರುಸಿದ್ದಯ್ಯ, ಎನ್.ಮಹೇಶ್, ರಾಜಪ್ಪ, ಸಿದ್ದರಾಜು, ಶಿವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ಖಜಾಂಚಿ ಭಾಗ್ಯರಾಜು, ಮುಖಂಡ ನಾಗರಾಜು, ಆದಿದ್ರಾವಿಡ ಮೂಲನಿವಾಸಿಗಳ ಹೋರಾಟ ಸಮಿತಿಯ ಸಿದ್ದಾರ್ಥ್, ಅಣಗಳ್ಳಿ ಬಸವ ರಾಜು, ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net