ಮುಂದುವರಿದ ಕುಮಾರಸ್ವಾಮಿ-ಸುಮಲತಾ ಸವಾಲ್​ ಜವಾಬ್​

sumalatha hdk
Published on

ಬೆಂಗಳೂರು/ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರ ನಡುವೆ ಪರಸ್ಪರ ಟೀಕೆ ಮುಂದುವರಿದಿದೆ. ಬುಧವಾರ ಇಬ್ಬರು ಪರಸ್ಪರ ಟೀಕಾ ಪ್ರಹಾರ ನಡೆಸಿ ಸವಾಲು ಹಾಕಿಕೊಂಡಿದ್ದಾರೆ.

ಗಣಿಗಾರಿಕೆ ವೀಕ್ಷಿಸಿದ ಸಂಸದೆ
ಶ್ರೀರಂಗಪಟ್ಟಣ: ಸಂಸದೆ ಸುಮಲತಾ ಅಂಬರೀಷ್​ ಅವರು ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತಾಲೂಕಿನ ವಿವಿಧೆಡೆ ಕಲ್ಲು ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಸೇರಿದ ಗಣಿ ಎನ್ನಲಾದ ಸ್ಥಳಕ್ಕೆ ಭೇಟಿ ನೀಡಿ ವಾಪಸ್​ ತೆರಳುವಾಗ, ಶಾಸಕರ ಬೆಂಬಲಿಗರು ರಸ್ತೆಯಲ್ಲಿ ನಿಂತು ಸಂಸದೆ ಕಾರು ನಿಲ್ಲಿಸಿದರು. ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡಗೆ ಸೇರಿದ್ದು ಎನ್ನಲಾದ ಗಣಿಯನ್ನು ವೀಸುವಂತೆ ಆಗ್ರಹಿಸಿದರು. ಈ ವೇಳೆ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕೊನೆಗೆ ಒತ್ತಡಕ್ಕೆ ಮಣಿದ ಸಂಸದೆ, ಮಾಜಿ ಶಾಸಕರಿಗೆ ಸೇರಿದ ಗಣಿ ಪ್ರದೇಶವನ್ನು ವೀಕ್ಷಣೆ ಮಾಡಿದರು.

  • ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ
  • ಕುಮಾರಸ್ವಾಮಿ ಹುಚ್ಚುಚ್ಚಾಗಿ ಹೇಳಿಕೆ ಕೊಡುತ್ತಿದ್ದಾರೆ
  • ಅಂಬರೀಶ್​ ಎಲ್ಲೂ ಹೋಗಿಲ್ಲ, ಮಂಡ್ಯ ಜಿಲ್ಲೆಯ ಜನ ನನ್ನ ಜತೆ ಇದ್ದಾರೆ 
  • ನನಗಿರುವ ಮಾಹಿತಿ ಆಧಾರದಲ್ಲಿ ಕೆಆರ್​ಎಸ್​ ಅಣೆಕಟ್ಟು ಬಿರುಕು ಬಿಟ್ಟಿರುವುದು ಹೇಳಿದೆ. ಬೇರೆಯವರು ಏನು ಹೇಳಿದ್ದಾರೋ ಗೊತ್ತಿಲ್ಲ
  • ಮಂಡ್ಯ ಜನರಿಗೆ ಒಳ್ಳೆಯದಾಗಬೇಕೆಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇನೆ. ಇದರಿಂದ ಏನೂ ಪ್ರತಿಫಲ ಬಯಸಿಲ್ಲ. 
  • ಮಂಡ್ಯ ಜಿಲ್ಲೆಯ ಶಾಸಕರು ಅವರ ಕೆಲಸವನ್ನೇ ಸರಿಯಾಗಿ ಮಾಡುತ್ತಿಲ್ಲ. ಎಂಪಿ ಕೆಲಸ ಮಾಡುತ್ತಿಲ್ಲ ಎಂದು ತಿರುಚುವುದು ಯಾಕೆ? 
  • ಜಲಾಶಯ, ನದಿಗಳು ರಾಷ್ಟ್ರೀಯ ಸಂಪತ್ತು ಅದನ್ನ ರಸುವ ಜವಾಬ್ದಾರಿ ನನ್ನದೂ ಕೂಡ 
  • ಕುಮಾರಸ್ವಾಮಿ ಪಾರ್ಟಿ ನಡೆಸುತ್ತಿದ್ದಾರಾ ಇಲ್ಲವೇ ಟೆರರಿಸಂ ನಡೆಸುತ್ತಿದ್ದಾರಾ ಎಂಬ ಅನುಮಾನ 
  • ಬಾಂಬುಗಳು, ಅಸಗಳು ಏನು ಬೇಕಾದರೂ ಮಾಡಿಕೊಳ್ಳಲಿ 
  • ಆಡಿಯೋ ಏನು ಬೇಕಾದರೂ ಹೊರ ಬಿಡಲಿ. ಬೇಕಾದರೆ ಮಿಸೈಲ್​ ಅನ್ನೇ ಬಿಡಲಿ
  • ಮಂಡ್ಯದಲ್ಲಿಯೇ ಸೋಲಿನ ರುಚಿ ತೋರಿಸುತ್ತೇನೆ
  • ಇವರನ್ನು ಎಂಪಿ ಮಾಡಿದ್ದು ಯಾಕೆ? ಕಲ್ಲು ಗಣಿಗಾರಿಕೆ ವೀಸುವುದಕ್ಕಾ?
  • ಸಿನಿಮಾದಲ್ಲಿ ನಟಿಸಿದಂತೆ ಇಲ್ಲೂ ಮಾಡಬಹುದು ಅಂದುಕೊಂಡಿದ್ದಾರೆ
  • ಪ್ರಜ್ವಲ್​ ರೇವಣ್ಣರನ್ನ ನೋಡಿ ಕಲಿಯಬೇಕಂತೆ, ಇದು ನಮ್ಮ ಕುಟುಂಬ ಒಡೆಯುವ ಹುನ್ನಾರವಲ್ಲವೇ?
  • ದೇವೇಗೌಡರು ಸೋತಾಗ ರಾಜಕೀಯ ಜೀವನ ಮುಗಿದೇ ಹೋಯ್ತು ಅಂದಿದ್ದರು
  • ಆಡಿಯೋ ರಿಲೀಸ್​ ಗೆ ಆತುರ ಯಾಕೆ ?  ನನಗೇನು ಆತುರ ಇಲ್ಲ ? ನಾನು ಲುವಾಗಿ ಮಾತನ್ನಾಡುವುದಿಲ್ಲ. ದಾಖಲೆಗಳೊಂದಿಗೆ ಮಾತನ್ನಾಡುವವನು
  • ಕೆಆರ್​ಎಸ್​ ನ 20 ಕಿಮೀ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕೆಂದು ಆದೇಶ ಮಾಡಿದ್ದು ನಾನು
  • ಅಕ್ರಮ ಗಣಿಗಾರಿಕೆ ಅಂತಾ ಮಾಧ್ಯಮಗಳನ್ನ ಕರೆದುಕೊಂಡು ಹೋಗಿದ್ದಾರಲ್ಲಾ, ಅವರನ್ನ ಹೆದುರಿಸಿ ದುಡ್ಡು ವಸೂಲಿ ಮಾಡಲು ಹೋಗಿದ್ದಾರಾ?

ನನ್ನ ಸ್ನೇಹಿತ ಅಂಬರೀಶ್​ ನಿಧನರಾದಾಗ ಅವರ ದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದು ಬೇಡವೆಂದು ಸುಮಲತಾ ಹೇಳಿದ್ದರು. ಆದರೆ ನಾನು ತೆಗೆದುಕೊಂಡು ಹೋಗಿ ಜನರ ವೀಕ್ಷಣೆಗೆ ಅನುವು ಮಾಡಿಕೊಟ್ಟೆ. ಅಂಬರೀಶ್​ ಬದುಕಿದ್ದಾಗ ಹೇಗೆ ನೋಡಿಕೊಂಡರೋ ಗೊತ್ತಿಲ್ಲ. ಈಗ ಪ್ರೀತಿ ಉಕ್ಕಿ ಹರಿಯುತ್ತಿದೆ. ಎಚ್​.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಪ್ರಜ್ವಲ್​ ರೇವಣ್ಣ ಅವರಿಗೆ ಮಾತ್ರ ಭವಿಷ್ಯವಿದೆ ಎನ್ನುವ ಸುಮಲತಾ ಏನು ಜ್ಯೋತಿಷಿನಾ? ನನಗೆ ಎಲ್ಲ ವಿಷಯಗಳು ಗೊತ್ತಿದೆ. ಸುಮಲತಾ ಮತ್ತು ಕುಮಾರಸ್ವಾಮಿ ಅವರ ನಡುವಿನ ವಾಕ್​ ಸಮರಗಳ ಮಧ್ಯೆ ನಾನು ಮಾತನಾಡುವುದಿಲ್ಲ.ಎಚ್​.ಡಿ.ದೇವೇಗೌಡ ಮಾಜಿ ಪ್ರಧಾನಿ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳ ಭಾಷೆಯಲ್ಲಿ ಸಂವೇದನಾಶೀಲತೆ ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದೆ. ಅದರಲ್ಲೂ ಮಹಿಳೆ ವಿಚಾರದಲ್ಲಿ ಭಾಷೆ ಮೇಲೆ ಹಿಡಿತವಿರಬೇಕು. ವೈ.ಎಸ್​.ವಿ.ದತ್ತಾ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net