

ಸವದತ್ತಿ: ಯಲ್ಲಮ್ಮನ ಗುಡ್ಡದಲ್ಲಿ ದೇವಸ್ಥಾನ ಪ್ರಾಧಿಕಾರ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಇಲ್ಲಿನ 80 ಅಡಿ ರಸ್ತೆ, ಚೈನ್ಗೇಟ್, ದೇವಸ್ಥಾನ ಮುಖ್ಯ ರಸ್ತೆಯಲ್ಲಿನ ಅನಧಿಕೃತ ಮಳಿಗೆ ಹಾಗೂ ಗೂಡಂಗಡಿ ತೆರವುಗೊಳಿಸುವ ಶನಿವಾರವೂ ಮುಂದುರಿಯಿತು.
ಯಲ್ಲಮ್ಮ ದೇವಸ್ಥಾನಕ್ಕೆ ಪ್ರತಿ ವರ್ಷ ಕೋಟ್ಯಂತರ ಭಕ್ತರು ಆಗಮಿಸುತ್ತಾರೆ. ಹೀಗಾಗಿ, ಭಕ್ತರಿಗೆ ಮೂಲ ಸೌಕರ್ಯ ಹಾಗೂ ದೇವಸ್ಥಾನದ ಅಭಿವೃದ್ಧಿಗಾಗಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ವಿನ@ ಯಾರಿಗೂ ತೊಂದರೆ ನೀಡುವ ಉದ್ದೇಶವಿಲ್ಲ. ಮಾದರಿ ದೇವಸ್ಥಾನವಾಗಿಸುವ ಯೋಜನೆ ಇದೆ. ಎಲ್ಲರೂ ಸಹಕಾರ ನೀಡಬೇಕು ಎಂದು ಯಲ್ಲಮ್ಮ ದೇವಸ್ಥಾನ ಪ್ರಾಧಿ-ಕಾರ ಕಾರ್ಯದರ್ಶಿ ಅಶೋಕ ದುಡಗುಂಟಿ ತಿಳಿಸಿದರು.
ತಹಸೀಲ್ದಾರ್ ಎಂ.ಎನ್.ಹೆಗ್ಗನ್ನವರ ಮಾತನಾಡಿ, ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವ ಮೂಲಕ ಸಹಕರಿಸುತ್ತಿದ್ದಾರೆ. ಶನಿವಾರ ಕೈಗೊಂಡ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿಲ್ಲ. ಯಾವುದೇ ಕಾರಣಕ್ಕೂ ವ್ಯಾಪಾರಸ್ಥರನ್ನು ಕಡೆಗಣಿಸುವುದಿಲ್ಲ ಎಂದರು.
ತೆರವು ಕಾರ್ಯಾಚರಣೆಗೆ 75 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಸ್ವಯಂ ಪ್ರೇರಿತ ತೆರವುಗೊಳಿಸಿ ಎಲ್ಲರೂ ಸಹಕರಿಸುತ್ತಿದ್ದಾರೆ ಎಂದು ಸಿಪಿಐ ಧರ್ಮಾಕರ ಧರ್ಮಟ್ಟಿ ತಿಳಿಸಿದರು.
ಸುಮಾರು ವರ್ಷಗಳಿಂದ ನೆಲೆಸಿದ್ದ ವ್ಯಾಪಾರಸ್ಥರಿಗೆ ತೆರವು ಕಾರ್ಯಾಚರಣೆ ಆಘಾತ ನೀಡಿದೆ. ವ್ಯಾಪಾರವನ್ನೇ ನಂಬಿ ಬಹಳಷ್ಟು ಬದುಕು ಕಟ್ಟಕೊಳ್ಳುತ್ತಿದ್ದಾರೆ. ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಬಡ ವ್ಯಾಪಾರಸ್ಥರಿಗೆ ಒಂದಡೆ ನೆಲೆ ಕಲ್ಪಿಸಿ ವ್ಯಾಪಾರ&ವಹಿವಾಟಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ವ್ಯಾಪಾರಸ್ಥರು ಆಗ್ರಹಿಸಿದರು.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಗೀತಾ ಕೌಲಗಿ, ಸಹ ಕಾರ್ಯದರ್ಶಿ ನಾಗರತ್ನಾ ಚೋಳಿನ್, ಪಿಎಸ್ಐಗಳಾದ ಕೆ.ಎಂ.ಬನ್ನೂರ, ಲ$್ಮಣ ಗೌಡಿ, ಅಲ್ಲಮಪ್ರಭು ಪ್ರಭುನವರ ಇದ್ದರು.