ಮುಂದುವರಿದ ದಲಿತರ ಹೋರಾಟ

Continued Dalit struggle
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಬಳಿ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಶ್ರೀಶೈಲ ಕಾಖಂಡಕಿ, ಪ್ರದೀಪ ಚಲವಾದಿ, ಬಸವರಾಜ ಕುಬಕಡ್ಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಮನಗೂಳಿ ಅಗಸಿ ಬಳಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ 18 ನೇ ದಿನ ಪೂರೈಸಿದೆ.

ಮುಖಂಡ ಬಸವಕುಮಾರ ಕಾಂಬಳೆ ಮಾತನಾಡಿ, ಕೆಲ ದಿನಗಳ ಹಿಂದೆ ಭವನಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ್ದ ಜಿಲ್ಲಾಧಿಕಾರಿಗಳು ಎರಡು ದಿನದಲ್ಲಿ ಜಾಗ ಮಂಜೂರು ಮಾಡಿ ಆದೇಶ ಪತ್ರ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಈವರೆಗೂ ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿಗಳು ನೀಡಿದ್ದ ಭರವಸೆ ಹುಸಿಯಾಗಿದೆ. ಅವರು ಕಾಣದ ಕೈಗಳ ಕೈಗೊಂಬೆಯಂತೆ ವರ್ತಿಸುವ ಮೂಲಕ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಸತೀಶ ಕುಬಕಡ್ಡಿ ಮಾತನಾಡಿ, ದಲಿತರು ಬೀದಿಯಲ್ಲಿ ಕುಳಿತು ಕಳೆದ ಕೆಲ ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಜಿಲ್ಲಾಡಳಿತ ದಿವ್ಯ ನಿರ್ಲಕ್ಷೃ ವಹಿಸಿ ದಲಿತರ ಬದುಕನ್ನು ಬೀದಿಗೆ ತಂದಿದೆ ಎಂದು ದೂರಿದರು.

ಪ್ರತಾಪ ಚಿಕ್ಕಲಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಮುಖಂಡರು ಸಮಸ್ಯೆ ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ರಕ್ತದಲ್ಲಿ ಪತ್ರ ಬರೆದು ಗಮನ ಸೆಳೆಯಲು ಯತ್ನಿಸಿದರು.

ಸಂಘಟನೆ ಅಧ್ಯಕ್ಷ ಶ್ರೀಶೈಲ ಕಾಖಂಡಕಿ, ಪ್ರದೀಪ ಚಲವಾದಿ, ಬಸವರಾಜ ಕುಬಕಡ್ಡಿ, ಕೀರ್ತಿ ಕಾಖಂಡಕಿ, ರವಿ ಕಾಖಂಡಕಿ, ಶಂಕರ ಕಾಖಂಡಕಿ, ರೋಹಿತ ಮಲಕಣ್ಣವರ, ಸಚಿನ ಕಾಖಂಡಕಿ, ಶೇಖರ ಕೂಡಗಿ, ರಾಜು ಕಾಖಂಡಕಿ, ಮಂಜುನಾಥ ಶಿವಶರಣ, ರಾಮಣ್ಣ ಕಾಖಂಡಕಿ, ಅರವಿಂದ ಕಾಖಂಡಕಿ, ಕೃಷ್ಣಾ ಚಲವಾದಿ, ಸಚಿನ ಕಾಖಂಡಕಿ, ಕೀರ್ತಿ ಕುಮಾರ ಕಾಖಂಡಕಿ, ಕಿರಣ ಕಾಖಂಡಕಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net