

ಚಿತ್ರದುರ್ಗ: ಮಾಂಡೌಸ್ ಎಫೆಕ್ಟ್ ಕೋಟೆನಾಡಿನಲ್ಲಿ ಭಾನುವಾರವೂ ಮುಂದುವರಿದಿದೆ. ಶನಿವಾರ ರಾತ್ರಿಯಿಂದಲೂ ಜಿಟಿಜಿಟಿ ಮಳೆ ಬಿಟ್ಟು, ಬಿ ಟ್ಟು ಬರುತ್ತಿದ್ದು ನಗರದಲ್ಲಿ ಥಂಡಿ ಹವಾ ಮುಂದುವರಿದಿದೆ. ಚಳಿ,ಮಳೆಯಿಂದ ರಕ್ಷಿಸಿಕೊಳ್ಳಲು ಜನರು ಸ್ವೆಟರ್,ಜರ್ಕಿನ್,ಉಲನ್ ಟೋಪಿ,ಮಪ್ಲರ್ ಇತ್ಯಾದಿಗಳಿಗೆ ಮೊರೆ ಹೋಗುತ್ತಿದ್ದಾರೆ.
ಮೊಳಕಾಲ್ಮೂರಲ್ಲಿ 40 ಮೀ ಮಿ ಮಳೆಯಾಗಿದ್ದರೆ,ಉಳಿದಂತೆ ಸಾಧಾರಣೆ ಮಳೆ ಆಗಿ ದ್ದರೂ,ಮಳೆ-ಚಳಿಯ ಕಿರಿ ಕಿರಿ ಅಧಿಕವಾಗಿ ದ್ದು,ಮಾಂಡೌಸ್ ಜನರಿಂದ ವಾರಾಂತ್ಯದ ಖುಷಿಯನ್ನು ಕಸಿದುಕೊಂಡಿದೆ. ಜಿಲ್ಲೆಯಲ್ಲಿ ಹಿಂಗಾರು ಅಂದಾಜು 3500 ಹೆಕ್ಟೇರ್ ಈರುಳ್ಳಿ ಬಿತ್ತನೆಯಾಗಿದ್ದು,ಇನ್ನೊಂದು ವಾರಗಳ ಇದೇ ವಾತಾವರಣ ಮುಂದುವರಿದರೆ ಈರುಳ್ಳಿ ಕೋಳೆ ರೋಗಕ್ಕೆ ತುತ್ತಾಗುವ ಆತಂಕ ಎದುರಾ ಗಿದೆ.
ಸದ್ಯಕ್ಕೆ ಈರುಳ್ಳಿಗೆ ಅಪಾಯವಿಲ್ಲ,ಆದರೆ ವಾತಾವರಣ ತಿಳಿಯಾಗದಿದ್ದರೆ ಈರುಳ್ಳಿ ರೋಗಕ್ಕೆ ತುತ್ತಾಗ ಬಹುದೆಂದು ತೋಟಗಾರಿಕೆ ಇಲಾಖೆ ಡಿಡಿ ಸವಿತಾ ಆತಂಕ ವ್ಯಕ್ತಪಡಿಸಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಅಂದಾಜು 40 ಸಾವಿರ ಹೆಕ್ಟೇರ್ ಕಡ್ಲೆ,2ಸಾವಿರ ಹೆಕ್ಟೇರ್ ಮೆಕ್ಕೆಜೋಳ,ಸೂರ‌್ಯಕಾಂತಿ 3 ಸಾವಿರ ಹೆಕ್ಟೇರ್ ಹಾಗೂ ರಾಗಿ 4 ಸಾವಿರ ಹೆಕ್ಟೇರ್ ರಾಗಿ ಬಿತ್ತನೆಯಾಗಿದೆ. ತಕ್ಷಣಕ್ಕೆ ಹಿಂಗಾರು ಬಿತ್ತನೆಯ ಮೇಲೆ ಯಾವುದೇ ದುಷ್ಪರಿಣಾಮವಾಗಿಲ್ಲವೆಂದು ಕೃಷಿ ಇಲಾಖೆ ತಿಳಿಸಿದೆ.
ತುಂತುರು ನೀರಾವರಿ
ತುಂತುರು ನೀರಾವರಿ ಯೋಜನೆ ಹಾಗೂ ಕೃಷಿ ಯಂತ್ರೋಪಕರಣ ಯೋಜನೆಗಳಡಿ ಅರ್ಹ ರೈತ ಫಲಾನುಭವಿಗಳಿಗೆ ಕೃಷಿ ಇಲಾಖೆ ನೆರವು ನೀಡಲಿದೆ. ತುಂತುರು ರೈತರಿಗೆ ಶೇ.90 ಸಹಾಯಧನ ಸಿಗಲಿದೆ. ಕೃಷಿ ಯಂತ್ರೋಕರಣ ಖರೀದಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.50 ಹಾಗೂ ಪರಿಶಿಷ್ಟ ಜಾತಿ,ಪಂಗಡದ ರೈತರಿಗೆ ಶೇ.90 ಸಹಾಯಧನ ಸಿಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.
ಶೀತ ಜ್ವರದ ಭಯ
ಥಂಡಿ ವಾತಾವರಣ ಹೀಗೆ ಮಕ್ಕಳು ಶೀತ ಜ್ವರಕ್ಕೆ ತುತ್ತಾಗುವ ಅಪಾಯವಿದೆ. ಬೆಚ್ಚನೆ ನೀರು,ಉಡುಪು ಅವರಿಗೆ ಅನಿವಾರ‌್ಯ.ವಯಸ್ಕ ರರು ವಿಶೇಷವಾಗಿ ಅಲರ್ಜಿ,ಅಸ್ತಮಾ ಇರುವಂಥವರು ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದು ಡಿಎಚ್‌ಒ ಡಾ.ರಂಗನಾಥ್ ಹೇಳಿ ದ್ದಾರೆ.
ಕುಸಿದ ಪಿಒಪಿ
ಜಿಟಿಜಿಟಿ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಆಯುಷ್ ಆಸ್ಪತ್ರೆಯ ಶಿಥಿಲ ಕಟ್ಟಡದ ಛಾವಣಿ ಪಿಒಪಿ ಭಾ ನುವಾರ ಕಳಚಿ ಬಿದ್ದಿದೆ.
-----