

ವಿಜಯಪುರ:ಪವಿತ್ರ ಕನ್ನಡ ಮಣ್ಣಿನಲ್ಲಿ ಜನಿಸಿದ ನಾವೆಲ್ಲರೂ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಹೊಂದುವ ಜತೆಗೆ ನಾಡು ಕಟ್ಟುವ ಕಾಯಕದಲ್ಲಿ ನಿರಂತರ ತೊಡಗಿಸಿಕೊಳ್ಳಬೇಕೆಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.ನಗರದ ಜಿಪಂ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಜಯಪುರ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದ ಸಾಹಿತ್ಯ ಪರಿಷತ್ನ ಸರ್ವ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ತಾಲೂಕು ಟಕಗಳು ಕ್ರಿಯಾಶೀಲವಾಗಿ ಸಾಹಿತ್ಯದ ಚಟುವಟಿಕೆ ಹಮ್ಮಿಕೊಳ್ಳಬೇಕು. ದತ್ತಿಗೋಷ್ಠಿ ನಡೆಸಬೇಕು. ಬಾಕಿ ಉಳಿದ ತಾಲೂಕುಗಳು ಸಾಹಿತ್ಯ ಸಮ್ಮೇಳನ ಏರ್ಪಡಿಸಿ ಕನ್ನಡದ ಅಕ್ಷರ ಜಾತ್ರೆ ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು.ಅಲ್ಲದೆ, ಸಾರ್ವಜನಿಕರಿಂದ ಸಂಗ್ರಹಿಸಿದ ದೇಣಿಗೆ ರಸೀದಿಯೊಂದಿಗೆ ಸರಿಯಾದ ಲೆಕ್ಕಾಚಾರ ಮಾಡಿ ಉಳಿದ ಹಣವನ್ನು ಕೇಂದ್ರ ಪರಿಷತ್ಗೆ ನೀಡಿ ಜಂಟಿ ಖಾತೆ ನಿರ್ವಹಿಸಲು ಸೂಚಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಬಿ.ಎಂ. ಪಟೇಲ ಪಾಂಡು ಮಾತನಾಡಿ, ತಾಲೂಕು ಅಧ್ಯಕ್ಷರು ತಾಲೂಕು ಟಕಗಳಲ್ಲಿ ನಿರಂತರ ಸಾಹಿತ್ಯಿಕ ಹಾಗೂ ಸಾಂಸತಿಕ ಚಟುವಟಿಕೆ ನಡೆಸಿ ಪಾರದರ್ಶಕ ಲೆಕ್ಕಾಚಾರದೊಂದಿಗೆ ಪರಿಷತ್ತಿನ ನತೆ, ಗೌರವ ಎತ್ತಿಹಿಡಿಯಬೇಕು ಎಂದು ತಿಳಿಸಿದರು.
ಜಿಲ್ಲಾ ಕಸಾಪ ಗೌರವ ಅಧ್ಯಕ್ಷೆ ಭಾರತಿ ಪಾಟೀಲ, ಗೌರವ ಸಲಹೆಗಾರ ಡಾ. ವಿ.ಡಿ. ಐಹೊಳ್ಳಿ, ಕಸಾಪ ಕಲಬುರಗಿ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ವಿಜಯಪುರ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿದರು.
ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ, ಶಿಲ್ಪಾ ಭಸ್ಮೆ, ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಕಸಾಪ ಪದಾಧಿಕಾರಿ ಜಿ.ಕೆ. ತಳವಾರ ಇದ್ದರು.
ಕಾರ್ಯಕಾರಿ ಸಮಿತಿ ನೂತನ ಪದಾಧಿಕಾರಿಗಳಾದ ಸುರೇಶ ಶೇಡಶ್ಯಾಳ, ಅರ್ಜುನ ಲಮಾಣಿ, ಶಿವರಾಜ ಬಿರಾದಾರ, ಎಂ.ಸಿ. ಮುಲ್ಲಾ, ದೇವರಹಿಪ್ಪರಗಿ ತಾಲೂಕು ಅಧ್ಯಕ್ಷ ಸಿದ್ದು ಮೇಲಿನಮನಿ, ಸಿಂದಗಿ ತಾಲೂಕು ಅಧ್ಯಕ್ಷ ವೈ.ಸಿ. ಮಯೂರ, ತಿಕೋಟಾ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ, ಬಬಲೇಶ್ವರ ಅಧ್ಯಕ್ಷ ಖಾಜಾಪಟೇಲ ಪಾಟೀಲ, ಬಸವನಬಾಗೇವಾಡಿ ಅಧ್ಯಕ್ಷ ಶಿವಾನಂದ ಡೋಣೂರ, ನಗರ ಟಕ ಅಧ್ಯಕ್ಷ ಜಗದೀಶ ಬೋಳಸೂರ ಅವರನ್ನು ನಾಡೋಜ ಡಾ. ಮಹೇಶ ಜೋಶಿ ಸನ್ಮಾನಿಸಿದರು.
ವಿರೇಶ ವಾಲಿ, ಸಿದ್ದು ಮೇಲಿನಮನಿ ತಂಡದವರು ಪ್ರಾರ್ಥಿಸಿ, ನಾಡಗೀತೆ ಪ್ರಸ್ತುತಪಡಿಸಿದರು. ಮಹ್ಮದಗೌಸ್ ಹವಾಲ್ದಾರ್ ಸ್ವಾಗತಿಸಿದರು. ಜಗದೀಶ ಬೋಳಸೂರ ನಿರೂಪಿಸಿದರು. ಶೋಭಾ ಬಡಿಗೇರ, ಅಹಮ್ಮದ ವಾಲಿಕಾರ ನಿರ್ವಹಿಸಿದರು. ಮಮತಾ ಮುಳಸಾವಳಗಿ ವಂದಿಸಿದರು.
ಕಮಲಾ ಮುರಾಳ, ರವಿ ಕಿತ್ತೂರ, ಸಂಗಮೇಶ ಮೇತ್ರಿ, ಕಮಲಾ ಮುರಾಳ, ಸುಖದೇವಿ ಅಲಬಾಳಮಠ, ಅಲ್ಲಾಭಕ್ಷ ವಾಲೀಕಾರ ಮತ್ತಿತರರಿದ್ದರು.
ವಿಜಯಪುರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಸಾಪ ಸಮಾಲೋಚನಾ ಸಭೆಯಲ್ಲಿ ನೂತನ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಡಾ. ಮಹೇಶ ಜೋಶಿ, ಶಿವಾನಂದ ಶೆಲ್ಲಿಕೇರಿ, ಹಾಸಿಂಪೀರ ವಾಲೀಕಾರ ಇತರರಿದ್ದಾರೆ.