ಸಂಪ್ರದಾಯಗಳ ಮುಂದುವರಿಕೆ ಎಲ್ಲರ ಜವಾಬ್ದಾರಿ, ಬ್ರಾಹ್ಮಣ ಅರ್ಚಕರ, ಪುರೋಹಿತರ ಪರಿಷತ್ ಅಧ್ಯಕ್ಷ ಮಂಜುನಾಥ್‌ಭಟ್ ಅಭಿಮತ

18 Nela ph 01 Training Camp
Published on

ನೆಲಮಂಗಲ: ಸಂಸ್ಕೃತಿಯ ಪ್ರತೀಕವಾಗಿರುವ ಪೂರ್ವಜರ ಧಾರ್ಮಿಕ ಆಚರಣೆ, ಸಂಪ್ರದಾಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಅಧ್ಯಕ್ಷ ಮಂಜುನಾಥ್‌ಭಟ್ ಅಭಿಪ್ರಾಯಪಟ್ಟರು.

ನಗರದ ಕೆರೆಬಾಗಿಲು ಶ್ರೀರಾಮ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಸಭಾ ಹಾಗೂ ಪುರೋಹಿತರ ಪರಿಷತ್ ಸಹಯೋಗದಲ್ಲಿ ಬ್ರಾಹ್ಮಣ ವಟುಗಳಿಗೆ ಆಯೋಜಿಸಿದ್ದ ತಿಂಗಳ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿ ಸಮುದಾಯದಲ್ಲೂ ವಿಭಿನ್ನವಾದ ಆಚರಣೆ, ಸಂಪ್ರದಾಯಗಳಿದ್ದು, ಸಂಸ್ಕಾರದ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಲಿವೆ. ಆದರೆ ಆಧುನಿಕತೆಯ ಹೆಸರಿನಲ್ಲಿ ಒಳ್ಳೆಯ ಆಚರಣೆಗಳನ್ನು ದೂರ ಸರಿಸುವುದು ಸರಿಯಲ್ಲ. ಇದನ್ನು ಮನಗಂಡು ಭವಿಷ್ಯದ ದೃಷ್ಟಿಯಿಂದ ಸಮುದಾಯದ ಯುವಜನತೆಗೆ ಸಮುದಾಯದ ಪೂಜಾ ವಿಧಿವಿಧಾನಗಳ ಕುರಿತಾದ ತರಬೇತಿ ನೀಡಲು ಮುಂದಾಗಿರುವುದಾಗಿ ತಿಳಿಸಿದರು.

ಸಮುದಾಯ ಹೊಂದಿರುವ ಅದ್ಭುತ ಇತಿಹಾಸವನ್ನು ಇಂದಿನ ಮಕ್ಕಳಿಗೆ ತಿಳಿಸಿಕೊಡಬೇಕಿದೆ. ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ, ಪ್ರತಿಭೆ ಜತೆಗೆ ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕಿದೆ. ನಿತ್ಯ ಪೂಜಾ ವಿಧಿವಿಧಾನಗಳ ಅನುಸರಣೆಯಿಂದ ಏಕಾಗ್ರತೆ, ಬುದ್ಧಿಮಟ್ಟ ಜತೆಗೆ ಸಂಸ್ಕಾರಯುತ ಗುಣಗಳನ್ನು ಕಲಿಸುತ್ತದೆ ಎಂದು ತಾಲೂಕು ಬ್ರಹ್ಮಣ ಸಭಾ ಅಧ್ಯಕ್ಷ ಜಗನ್ನಾಥ್ ತಿಳಿಸಿದರು.

ಶೈಕ್ಷಣಿಕ, ಸಾಮಾಜಿಕವಾಗಿ ಸದೃಢವಾಗಿರುವ ವಿಪ್ರ ಸಮುದಾಯ ಸಮಾಜದ ಯುವಪೀಳಿಗೆಗೆ ನಿತ್ಯದೇವತಾರ್ಚನೆ, ಸಂಧ್ಯಾವಂದನೆಯಂತಹ ಆಚರಣೆಗಳನ್ನು 30 ದಿನಗಳ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ. 30ಕ್ಕೂ ಹೆಚ್ಚು ವಟುಗಳು ತರಬೇತಿಯಲ್ಲಿ ಭಾಗವಹಿಸಿದ್ದು ಮುಂದಿನ ದಿನಗಳಲ್ಲಿ ಸಹಸ್ರ ಸಂಖ್ಯೆಯ ವಟುಗಳಿಗೆ ತರಬೇತಿ ನೀಡು ಗುರಿ ಹೊಂದಿರುವುದಾಗಿ ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಆರ್ಚಕರ ಮತ್ತು ಪುರೋಹಿತರ ಪರಿಷತ್ ತಾಲೂಕು ಉಪಾಧ್ಯಕ್ಷ ನಾಗದತ್ತ, ಕಾರ್ಯದರ್ಶಿ ಮಂಜುನಾಥ್‌ಹೆಗ್ಗಡೆ, ಖಜಾಂಚಿ ಎಚ್.ಆರ್.ರಾಮಕೃಷ್ಣ, ಪ್ರಧಾನಸಂಚಾಲಕ ಎನ್.ಜಿ.ನಾಗಭೂಷಣ್, ಸಹಸಂಚಾಲಕ ಮಹೇಶ್‌ಭಟ್, ನಿರ್ದೇಶಕ ಆರ್.ಚೇತನ್‌ಪ್ರಸಾದ್, ಹಿರಿಯ ಸಲಹೆಗಾರ ಭದ್ರಿನಾಥ್‌ಆಚಾರ್, ತಾಲೂಕು ಬ್ರಾಹ್ಮಣ ಸಭಾದ ಉಪಾಧ್ಯಕ್ಷ ವಿ.ರಾಘವೇಂದ್ರಶಾಸ್ತ್ರಿ, ಕಾರ್ಯದರ್ಶಿ ಬಿ.ಕೆ.ನಟರಾಜ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net