

ವಿಜಯವಾಣಿ ಸುದ್ದಿಜಾಲ ಉಡುಪಿ
ಕೊಂಕಣ ರೈಲ್ವೆ ಕಾಪೋರ್ರೇಷನ್ ಲಿ.(ಕೆಆರ್ಸಿಎಲ್) ಕೊಂಕಣ ರೈಲು ಮಾರ್ಗದಲ್ಲಿ ಕೋಲಾಡ್ ಹಾಗೂ ಸುರತ್ಕಲ್ ನಡುವೆ 1999ರಿಂದ ರೋರೋ ಸೇವೆ (ರೋಲ್ ಆನ್ -ರೋಲ್ ಆಫ್) ನೀಡುತ್ತಿದ್ದು, ಟ್ರಕ್ಗಳ ಸಂಚಾರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ.
ಕೊಂಕಣ ರೈಲು ಮಾರ್ಗದಲ್ಲಿ ರೋರೋ ಸೇವೆ ಹಿಂದಿನಂತೆ ಮುಂದುವರಿಯಲಿದ್ದು, ಮಾಹಿತಿಗಳಿಗಾಗಿ ಟ್ರಕ್ಕರ್ಗಳು ಕೊಂಕಣ ರೈಲ್ವೆಯ ವೆಬ್ಸೈಟ್ www.konkanrailway.com ಸಂಪರ್ಕಿಸಬಹುದು ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.