

ಮುದಗಲ್: ಕಾಂಗ್ರೆಸ್‌ಗೆ ಸ್ವ ಇಚ್ಛೆಯಿಂದ ಯಾರೇ ಸೇರ್ಪಡೆಯಾಗಬಹುದು. ರಾಜಕೀಯದಲ್ಲಿ ಪಕ್ಷಾಂತರ ಸಹಜ. ಆದರೆ, ಪಕ್ಷಾಂತರವನ್ನು ಆಪರೇಷನ್ ಹಸ್ತ ಎಂದು ಹೇಳುವುದು ಸರಿಯಲ್ಲವೆಂದು ಮಾಜಿ ಸಚಿವ ಅಮರೇಗೌಡ ಬಯ್ಯಪುರ ಹೇಳಿದರು.
ಕನ್ನಾಪುರಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು. ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವೆ ಎಂದು ಕಳೆದ ಹತ್ತು ವರ್ಷಗಳಿಂದ ಪಕ್ಷದ ಪ್ರಮುಖರಿಗೆ ಹೇಳುತ್ತಾ ಬಂದಿದ್ದೇನೆ. ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಅವಕಾಶ ನೀಡುವಂತೆ ಮನವಿ ಮಾಡಿದ್ದು, ಹೈಕಮಾಂಡ್ ಸಮ್ಮತಿಸಿದರೆ ಸ್ಪರ್ಧಿಸುವುದಾಗಿ ತಿಳಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ವರ್ಷ ಸುಭದ್ರವಾಗಿ ಇರುತ್ತದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಲಿದೆ ಎಂದು ಬಿಜೆಪಿಯವರು ಹೇಳುತ್ತಿರುವುದು ಸರಿಯಲ್ಲ. ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆ ಜಾರಿಗೆ ತಂದಿರುವುದು ಮೆಚ್ಚುಗೆಗೆ ಕಾರಣವಾಗಿದೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪೆನ್‌ಡ್ರೈವ್‌ನಲ್ಲಿ ಯಾವುದೇ ಸಾಕ್ಷೃ ಇಲ್ಲ ಎಂದು ಬಯ್ಯಪುರ ತಿಳಿಸಿದರು. ಪ್ರಮುಖರಾದ ಶರಣಪ್ಪ ಮೇಟಿ, ನಾಗನಗೌಡ ತುರಡಗಿ, ಎಲ್.ಟಿ.ನಾಯ್ಕ, ಹನುಮನಗೌಡ ಬಯ್ಯಪುರು ಇದ್ದರು.