ತೃಪ್ತಿಯೇ ಸಂತೋಷದ ಮೂಲ, ತುಪ್ಪೆಕಲ್ಲು ನರಸಿಂಹ ಶೆಟ್ಟಿ ಅಭಿಮತ

mng-21mar-mpc
ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಏರ್ಪಡಿಸಿದ ಕಾರ್ಯಕ್ರಮದಲ್ಲಿ ತುಪ್ಪೆಕಲ್ಲು ನರಸಿಂಹ ಶೆಟ್ಟಿ ಉಪನ್ಯಾಸ ನೀಡಿದರು.
Published on

ಮಂಗಳೂರು: ತೃಪ್ತಿಯೇ ಸಂತೋಷದ ಮೂಲ. ಅತಿಯಾದ ಆಸೆ ದುಃಖಕ್ಕೆ ಕಾರಣವಾಗುತ್ತದೆ. ಹರುಷಕ್ಕೆ ತಮ್ಮಲ್ಲಿದ್ದುದನ್ನೇ ತೃಪ್ತಿಗೊಳಪಡಿಸಿ ಸಂತೋಷ ಕಾಣಬೇಕು ಎಂದು ಮಂಗಳೂರು ಥಿಯಾಸಾಫಿಕಲ್ ಸೊಸೈಟಿ ಅಧ್ಯಕ್ಷ ತುಪ್ಪೆಕಲ್ಲು ನರಸಿಂಹ ಶೆಟ್ಟಿ ಹೇಳಿದರು.

ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಏರ್ಪಡಿಸಿದ ಡಿವಿಜಿಯವರ ಮಂಕುತಿಮ್ಮನ ಕಗ್ಗ ಆಧಾರಿತ ಜೀವನಾನುಭವ ವಿಷಯದ ಬಗ್ಗೆ ಇತ್ತೀಚೆಗೆ ಉಪನ್ಯಾಸ ನೀಡಿದರು. ಕಾರ್ಯದರ್ಶಿ ಪಿ.ರವೀಂದ್ರ ರಾವ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಜಿ.ಗೋವಿಂದರಾಯ ಪ್ರಭು ವಂದಿಸಿದರು. ಯು.ರಾಮ ರಾವ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net