

ಕುಮಟಾ: ನಿಯಂತ್ರಣ ತಪ್ಪಿದ ಕಂಟೇನರ್ ವಾಹನ ಹೆದ್ದಾರಿಯಂಚಿಗೆ ನಿಲ್ಲಿಸಿದ್ದ ಎರಡು ಆಟೋ ರಿಕ್ಷಾ, ಒಂದು ಸರಕು ರಿಕ್ಷಾ ಹಾಗೂ ಬೈಕ್‌ಗೆ ಗುದ್ದಿ ಪಲ್ಟಿಯಾದ ಘಟನೆ ತಾಲೂಕಿನ ಧಾರೇಶ್ವರ ಸನಿಹದ ನಾಗತೀರ್ಥದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ನಡೆದಿದೆ.
ಕಂಟೇನರ್ ಚಾಲಕ ಬೆಳಗಾವಿಯ ವೈಭವನಗರ ನಿವಾಸಿ ಸಿದ್ರಾಮಯ್ಯ ಫಕೀರಯ್ಯ ಬನ್ನೂರು(32) ಹಾಗೂ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ತಡಕಲ್ ನಿವಾಸಿ, ಕ್ಲೀನರ್ ಪ್ರಸನ್ನ ರಾಮಣ್ಣ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಮಟಾದಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಕಂಟೇನರ್ ಹೆದ್ದಾರಿಯಂಚಿಗೆ ನಿಲ್ಲಿಸಿದ್ದ ಸ್ಥಳೀಯ ಗಣೇಶ ಮಂಜುನಾಥ ನಾಯ್ಕ, ಚಿದಾನಂದ ಮಹಾಬಲೇಶ್ವರ ನಾಯ್ಕ ಅವರ ಆಟೋರಿಕ್ಷಾ, ಭರತ್ ಪಾಂಡುರಂಗ ನಾಯ್ಕ ಅವರ ಸರಕು ರಿಕ್ಷಾ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.