ಮಂಗಳೂರು ಗಾಂಜಾ ಸೇವನೆ ಇಬ್ಬರ ಬಂಧನ

drugs
Published on

ಮಂಗಳೂರು: ನಗರದ ಉರ್ವಸ್ಟೋರ್ ಮತ್ತು ನೆಹರೂ ಮೈದಾನ ಬಳಿ ಗಾಂಜಾ ಸೇವನೆ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.


ಹಿತೇಶ್ ಮತ್ತು ತಸ್ಲ್ೀ ಪ್ರಕರಣದ ಆರೋಪಿಗಳು. ಬುಧವಾರ ರಾತ್ರಿ ಉರ್ವಾಸ್ಟೋರ್ ಮಾರ್ಕೆಟ್ ಗ್ರೌಂಡ್ ಬಳಿ ಹಿತೇಶ್ ಎಂಬಾತ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು ಉರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಯ ವಿರುದ್ದ ಎನ್‌ಡಿಪಿಎಸ್ ಕಾಯ್ದೆಯಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇನ್ನೊಂದು ಪ್ರಕರಣದಲ್ಲಿ ನೆಹರೂ ಮೈದಾನದ ಕಾರ್ಪೋರೇಶನ್ ಬ್ಯಾಂಕ್ ಪಾರ್ಕ್ ಬಳಿ ಕಾಸರಗೋಡು ಕುಂಬಳೆ ನಿವಾಸಿ ತಸ್ಲ್ೀ ಎಂಬಾತ ಗಾಂಜಾ ಸೇವನೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ. ಸಾರ್ವಜನಿಕರ ಮಾಹಿತಿ ಮೇರೆಗೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿಯು ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ವೈದ್ಯಕೀಯ ತಪಾಸಣೆಯಲ್ಲೂ ದೃಢಪಟ್ಟಿದೆ. ಆರೋಪಿಯ ವಿರುದ್ದ ಎನ್‌ಡಿಪಿಎಸ್ ಕಾಯ್ದೆಯಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net