ಕ್ಯಾರೆಟ್ ಸೇವನೆ ಆರೋಗ್ಯಕ್ಕೆ ಪೂರಕ

6bhr 1
Published on

ಬಾಳೆಹೊನ್ನೂರು: ತರಕಾರಿಗಳಲ್ಲಿ ಒಂದಾದ ಕ್ಯಾರೆಟ್ ಸತ್ವಯುತ ತರಕಾರಿ ಎಂದು ಸರ್ಕಾರಿ ಸ್ವತಂತ್ರ ಪಪೂ ಕಾಲೇಜಿನ ಉಪನ್ಯಾಸಕಿ ಮಮತಾ ಸೋಮೇಶ್ ಹೇಳಿದರು.

ಪಟ್ಟಣದ ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟ ಶುಕ್ರವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಕ್ಯಾರೆಟ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಯಾರೆಟ್‌ನಲ್ಲಿ ಹಲವು ನೈಸರ್ಗಿಕ ಪೋಷಕಾಂಶಗಳಿದ್ದು, ಕ್ಯಾರೆಟ್ ಸೇವನೆಯಿಂದ ದೃಷ್ಟಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದ್ದು, ಉತ್ತಮ ತ್ವಚೆಗೂ ಕ್ಯಾರೆಟ್ ಉಪಯೋಗಕಾರಿ. ಇದು ರೋಗ ನಿರೋಧಕ ಶಕ್ತಿ ಬಲಪಡಿಸಲಿದ್ದು, ಹೃದ್ರೋಗ, ರಕ್ತದೊತ್ತಡ ಮುಂತಾದ ಸಮಸ್ಯೆಗಳಿಗೂ ರಾಮಬಾಣವಾಗಿದೆ ಎಂದರು.

ಜೀರ್ಣಕ್ರಿಯೆಯಲ್ಲಿ ಅತ್ಯಂತ ಸಹಕಾರಿಯಾಗಿರುವ ಕ್ಯಾರೆಟ್ ನೈಸರ್ಗಿಕವಾದ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಮತೋಲನಗೊಳಿಸಿ ಮಧುಮೇಹ ನಿಯಂತ್ರಣಕ್ಕೆ ಉತ್ತೇಜಿಸುತ್ತದೆ. ವೈದ್ಯರ ಪ್ರಕಾರ ತೂಕ ಇಳಿಸುವ ಆಹಾರದಲ್ಲಿ ಕ್ಯಾರೆಟ್ ಕೂಡ ಒಂದಾಗಿದೆ. ಕ್ಯಾರೆಟ್‌ನಲ್ಲಿರುವ ಕ್ಯಾಲ್ಸಿಯಂ, ರಂಜಕ ಮತ್ತು ವಿಟಮಿನ್ ಕೆ ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದ್ದು, ಮೂಳೆ ಸಾಂದ್ರತೆ, ಚರ್ಮದ ಆರೈಕೆಯಲ್ಲಿ ಮಹತ್ವವಾಗಿರುವ ಕ್ಯಾರೆಟ್‌ನಲ್ಲಿ ವಿಟಮಿನ್ ಎ ಅಂಶವು ಚರ್ಮಕ್ಕೆ ನೈಸರ್ಗಿಕವಾದ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.

ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ, ಸೀನಿಯರ್ ಚೇಂಬರ್ ಅಧ್ಯಕ್ಷ ಡಿ.ರಾಜೇಂದ್ರ, ಪ್ರಾಚಾರ್ಯ ಕೆ.ಆರ್.ಬೂದೇಶ್, ಮುಖ್ಯಶಿಕ್ಷಕ ಸುರೇಂದ್ರ, ಉಪನ್ಯಾಸಕ ಸೋಮೆಶ್‌ಗೌಡ, ಜೇಸಿಐ ಮಾಜಿ ಅಧ್ಯಕ್ಷ ಸುಧಾಕರ್, ಮನುಕುಮಾರ್, ಹಾಸ್ಯ ಕಲಾವಿದ ಶ್ರೀಕೃಷ್ಣಭಟ್, ಪ್ರಮುಖರಾದ ವಿ.ಅಶೋಕ್, ಕೆ.ಪ್ರಸಾದ್, ಪ್ರದೀಪ್, ಅನ್ವಯ್, ಆರ್ಯನ್, ಸಿಂಧು ಸಿರಿಗೌಡ, ಅವನಿ ತೇಜಸ್ವಿನಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net