ಗ್ರಾಹಕರು ಆಮಿಷಕ್ಕೆ ಒಳಗಾಗಬಾರದು

23Jaggu5
ಬೆಳಗಾವಿಯ ಬಿ.ಕೆ. ಮಾಡೆಲ್ ಹೈಸ್ಕೂಲ್ ಸಭಾಭವನದಲ್ಲಿ ಆಯೋಜಿಸಿದ್ದ ಗ್ರಾಹಕರ ಜಾಗೃತಿ ಕಾರ್ಯಕ್ರಮವನ್ನು ಶ್ರೀಶೈಲ ಕಂಕಣವಾಡಿ ಉದ್ಘಾಟಿಸಿದರು. ಸೋಮಶೆೇಖರ ವಿ.ಕೆ., ಶ್ರೀನಿವಾಸ ಶೀವಣಗಿ, ಶೈಲಾ ಚಾಟೆ, ಗುಂಡೇನಟ್ಟಿ ಮಧುಕರ ಇತರರಿದ್ದರು.
Published on

ಬೆಳಗಾವಿ: ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಸರ್ಕಾರ, ನ್ಯಾಯಾಂಗವಿದೆ. ಮಾರಾಟಗಾರರು ಗ್ರಾಹಕರಿಗೆ ಕಿರುಕುಳ ನೀಡಿದರೆ ಅಥವಾ ಶೋಷಿಸಿದಲ್ಲಿ ಮಾರಾಟಗಾರರ ವಿರುದ್ಧ ಮೊಕದ್ದಮೆ ಹೂಡಬಹುದಾಗಿದೆ. ಶೋಷಣೆ ಪುರಾವೆ, ಬಿಲ್, ಇತರ ದಾಖಲೆಗಳಿರುವುದು ಅವಶ್ಯ ಎಂದು ಆಹಾರ, ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಹೇಳಿದರು.

ಬೆಳಗಾವಿ ಗ್ರಾಹಕ ರಕ್ಷಣಾ ಮತ್ತು ಮಾರ್ಗದರ್ಶನ ಕೇಂದ್ರ ಮತ್ತು ಟೆಲಿಕಾಂ ರೆಗ್ಯುಲೇಟರಿ ಅಥಾರಟಿ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಬಿ.ಕೆ. ಮಾಡೆಲ್ ಹೈಸ್ಕೂಲ್ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಹಕರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕ ಯಾವುದೇ ವಸ್ತು ಖರೀಸಿದಿಸಿದರೂ ಬಿಲ್ ಪಡೆಯಬೇಕು. ಮಾರಾಟಗಾರರು ನೀಡುವ ಉಚಿತ, ಚೈನ್ ವ್ಯವಹಾರದ ಆಮಿಷಕ್ಕೆ ಒಳಗಾಗಬಾರದು. ಗ್ರಾಹಕರು ತಮ್ಮ ಸಮಸ್ಯೆಗಳಿಗೆ ಗ್ರಾಹಕರ ವೇದಿಕೆಯಿಂದ ಪರಿಹಾರ ಪಡೆಯಬೇಕು ಎಂದರು.

ಗ್ರಾಹಕ ಶಕ್ತಿ ಸಂಸ್ಥೆಯ ಸಂಸ್ಥಾಪಕ ಸೋಮಶೆೇಖರ ವಿ.ಕೆ. ಮಾತನಾಡಿ, ಗ್ರಾಹಕರ ಜಾಗೃತಿ ಹೆಚ್ಚಿಸಲು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಗ್ರಾಹಕ ರಕ್ಷಣಾ ಮಂಡಳಿ ಸ್ಥಾಪಿಸಲಾಗಿದೆ ಎಂದರು.

ಲೆಕ್ಕ ಪರಿಶೋಧಕ ಶ್ರೀನಿವಾಸ ಶೀವಣಗಿ ಮಾತನಾಡಿ, ಮೊಬೈಲ್ ಅತ್ಯವಶ್ಯ ವಸ್ತು. ಅದರ ಉಪಯೋಗವಾಬೇಕು ಹೊರತು ದುರಪಯೋಗವಾಗಬಾರದು ಎಂದರು. ಶೈಲಾ ಚಾಟೆ, ಗುಂಡೇನಟ್ಟಿ ಮಧುಕರ, ಮಂಜುಳಾ ಜಕನೂರ, ಅಚ್ಯುತ ಪ್ರಯಾಗ, ಜಯಶ್ರೀ ಕುರ್ತಕೋಟಿ, ಪ್ರಶಾಂತ ಅಧೋಕೆ ಇತರರಿದ್ದರು. ಭಾಗ್ಯಶ್ರೀ ಕಾರೇಕರ ಪ್ರಾರ್ಥಿಸಿದರು. ಪ್ರೊ. ಐ.ಜಿ. ಪಾಟೀಲ ಸ್ವಾಗತಿಸಿ, ಪರಿಚಯಿಸಿದರು. ಅನಘಾ ಪ್ರಯಾಗ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net