

ಬೆಳಗಾವಿ: ಗ್ರಾಹಕರ ವಿಶ್ವಾಸದೊಂದಿಗೆ 118 ವರ್ಷಗಳ ಕಾಲ ಯಶಸ್ವಿಯಾಗಿ ನಡೆದು ಬಂದಿರುವ ಪಯೋನೀರ್ ಅರ್ಬನ್ ಬ್ಯಾಂಕ್ ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ. ಬ್ಯಾಂಕ್‌ನ ಸಾಧನೆಗೆ ಈ ಹಿಂದಿನ ಎಲ್ಲ ಆಡಳಿತ ಮಂಡಳಿಯ ಸದಸ್ಯರ ಮಾರ್ಗದರ್ಶನ, ಸಿಬ್ಬಂದಿಯ ಶ್ರಮ ಕಾರಣ ಎಂದು ಶಾಸಕ ಸೇಠ್ ಹೇಳಿದರು.
ನಗರದ ಕಣಬರ್ಗಿಯಲ್ಲಿ ಪಯೋನೀರ್ ಅರ್ಬನ್ ಬ್ಯಾಂಕ್‌ನ ಆರನೇ ಶಾಖೆ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿ, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವ ಪಯೋನೀರ್ ಬ್ಯಾಂಕಿನ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.
ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅವಿನಾಶ ಪೋತದಾರ ಮಾತನಾಡಿ, ನಂಬಿಕೆ, ಸಂಕಲ್ಪ, ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುವುದಕ್ಕೆ ಪಯೋನೀರ್ ಬ್ಯಾಂಕ್‌ನ ಪ್ರಗತಿಯೇ ನಿದರ್ಶನವಾಗಿದೆ. 1905ರಲ್ಲಿ ಈ ಬ್ಯಾಂಕ್ ಸ್ಥಾಪಿಸಲಾಗಿದೆ. ನನ್ನ ಅಜ್ಜ ಭೀಮರಾವ್ ಪೋತದಾರ ಸತತ 49 ವರ್ಷಗಳ ಕಾಲ ಈ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕ್‌ನ ಅಧ್ಯಕ್ಷ ಪ್ರದೀಪ ಅಷ್ಟಕೇರ್ ವಹಿಸಿದ್ದರು. ಸುಂದರ ಕಾರ್ವಿನಕೊಪ, ಸಂಜಯ ಗುಂಡಪಣ್ಣವರ, ಸುನೀಲ ಚೌಗುಲೆ ಮೊದಲಾದವರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಅನಿಲ ಬೆನಕೆ, ಉಪಾಧ್ಯಕ್ಷ ರಂಜಿತ ಚವ್ಹಾಣ, ನಾಗೇಶ ಗಡ್ಡೆ, ಮನೋಹರ ಹುಕ್ಕೇರಿಕರ, ರವಿ ಸಾಳುಂಕೆ, ಅನಂತ ಲಾಡ, ಅಸ್ಮಿತಾ ಪಾಟೀಲ, ಅರ್ಜುನ ಮುಚಂಡಿಕರ, ನಾರಾಯಣ ನಾಯಿಕ, ಅಶೋಕ ಶಿರೋಳೆ, ದಾನೇಶ ಬಾಳೇಕುಂದ್ರಿ, ಬಾಹುಬಲಿ ವೀರಗೌಡರ, ಸಂಜಯ ಇನಾಮದಾರ, ಮಹೇಶ ಹಿರೇಮಠ, ಜಯವಂತ ಪಾಟೀಲ, ದೀಪಕ ಕಂಗ್ರಾಳಕರ, ಬಾಳಾರಾಮ ಮೋಟರೆ, ಶಿವಾಜಿ ಪಾಟೀಲ, ಡಾ.ಸಿದ್ದು ಒಡೆಯರ, ಭಾವಕಣ್ಣ ಹೀರೋಜಿ, ಬಸವಾಣಿ ಭಂಡಾರಗಾಲಿ, ಪುಂಡಲೀಕ ಮಲಾಯಿ, ಶಿವರಾಜ ಪಾಟೀಲ, ಗಜಾನನ ಪಾಟೀಲ, ಯಲ್ಲಪ್ಪ ಬೆಳಗಾಂವಕರ, ಸುಹಾಸ ತರಾಳ, ರವಿ ದೊಡ್ಡಣ್ಣವರ, ಮಾರುತಿ ಸಿಗ್ಗಿಹಳ್ಳಿ, ಗಜಾನನ ಥೋಕನೇಕರ, ವಿದ್ಯಾಧರ ಕುರಣೆ, ಬಸವರಾಜ ಇಟಿ, ನಿತಿನ ಹಿರೇಮಠ, ದಾನೇಶ್ವರ ಸಾಯಿನೇಕರ, ಕಮಲೇಶ ಮಾಯಾಣಾಚೆ, ಸುವರ್ಣಾ ಶಹಾಪುರಕರ ಇತರರಿದ್ದರು.
ಈ ಭಾಗದ ಹೆಚ್ಚು ನಾಗರಿಕರು ಪಯೋನೀರ್ ಬ್ಯಾಂಕ್‌ನಲ್ಲಿ ಖಾತೆ ತೆರೆದು ಬ್ಯಾಂಕ್‌ಗೆ ಉತ್ತೇಜನ ನೀಡಿ ತಾವೂ ಅಭಿವದ್ಧಿ ಹೊಂದಿ.| ಯಲ್ಲಪ್ಪ ಕುರಬರ ಮಾಜಿ ಮೇಯರ್