

ಹುಬ್ಬಳ್ಳಿ: ಸಮೀಪದ ರಾಯಾಪುರದ ಎಸ್.ಜೆ.ಎಂ.ವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ರಾಷ್ಟ್ರೀಯ ಗ್ರಾಹಕರ ದಿನ ಆಚರಿಸಲಾಯಿತು.
ಗ್ರಾಹಕರ ದಿನಾಚರಣೆಯ ಘೋಷವಾಕ್ಯ "ಇ -ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ' ಕುರಿತು ಉಪನ್ಯಾಸ ಏರ್ಪಡಿಸಲಾಯಿತು.
ಧಾರವಾಡದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿರ್ ಪರಶುರಾಮ ಎಫ್. ದೊಡ್ಡಮನಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ವಸ್ತು ಮತ್ತು ಸೇವೆಗಳ ಮೋಸ ಹಾಗೂ ವಂಚನೆಗಳಿಂದ ಎಚ್ಚೆತ್ತುಕೊಳ್ಳಬೇಕಾದ ಅಗತ್ಯ ಇದೆ. ತಿನ್ನುವ ಆಹಾರದಿಂದ ಹಿಡಿದು, ಬಳಸುವ ಪ್ರತಿಯೊಂದು ವಸ್ತು ಮತ್ತು ಸೇವೆಗಳ ಕುರಿತು ಸಾಮಾನ್ಯ ಜ್ಞಾನವಿರಬೇಕು ಎಂದರು.
ಉಪನ್ಯಾಸ ನೀಡಿದ ಜನಾದೇಶ ಸಂಸ್ಥೆಯ ಅಧ್ಯಕ್ಷ ಬಸವಪ್ರಭು ಹೊಸಕೇರಿ, ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಮೂಲ ಉದ್ದೇಶವೇ ಗ್ರಾಹಕರ ಕಾನೂನುಗಳ ಅರಿವು ಮೂಡಿಸುವುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶಪ್ಪ ಬೂತೆ ಅವರು ಮಾತನಾಡಿದರು.
ನಿವೃತ್ತ ರೈಲ್ವೆ ಅಧಿಕಾರಿ ಹಾಗೂ ಆಹಾರ ತಜ್ಞ ಬಸವರಾಜ ಬಿಳಿಅಂಗಡಿ ಅವರು, ಆಹಾರ ಅಪವ್ಯಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಂ.ಎಂ. ನರಸಣ್ಣವರ, ಧಾರವಾಡದ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕ ಸುಜಾತಾ ಸಾವಳಗಿ, ಜನಾದೇಶದ ಉಪಾಧ್ಯಕ್ಷ ಪ್ರೊ. ಜೆ.ಪಿ. ಯಂಡಿಗೇರಿ ಉಪಸ್ಥಿತರಿದ್ದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ್ ಹೆಗ್ಗಳಗಿ ಸ್ವಾಗತಿಸಿದರು. ಮಹಾಂತ ಕಾಲೇಜಿನ ಪ್ರಾಧ್ಯಾಪಕಿ ಛಾಯಾ ಹುಬ್ಬಳ್ಳಿ ಪ್ರಾಥಿರ್ಸಿದರು. ಪ್ರಾಚಾರ್ಯ ಡಾ. ಶಾಂತಯ್ಯ ಕೆ.ಎಸ್. ವಂದಿಸಿದರು. ಜನಾದೇಶ ಸಂಸ್ಥೆ ಕಾರ್ಯದಶಿರ್ ಮಾಧುರಿ ಕುಲಕಣಿರ್ ಕಾರ್ಯಕ್ರಮ ನಿರೂಪಿಸಿದರು.