

ಧಾರವಾಡ: ನಿಗದಿತ ಅವಧಿಯಲ್ಲಿ ಲೇಔಟ್ ಮಾಡಿ ಾರ್ಮ್‌ಹೌಸ್ ಖರೀದಿಗೆ ಕೊಡದ ಗೋಲ್ಡ್ ಕ್ರೌನ್ ಸಬಲೈಮ್ ಬಿಲ್ಡರ್ಸ್‌ಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಗ್ರಾಹಕನಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
ನಗರದ ಟೋಲ್‌ನಾಕಾ ನಿವಾಸಿ ಹೆರಾಲ್ಡ್ ಜೋಸ್ೆ ಎಂಬುವರು ಇಮ್ರಾನ್ ಕಳ್ಳಿಮನಿ ಕೆಲಗೇರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಾರ್ಮ್ ಹೌಸ್ ಅನ್ನು 40 ಲಕ್ಷ ರೂಪಾಯಿಗೆ 2021ರ ಜ. 25ರಂದು ಖರೀದಿಸಿದ್ದರು. ಇಬ್ಬರ ಮಧ್ಯೆ ಖರೀದಿ ಕರಾರುಪತ್ರ ಆಗಿ ಗ್ರಾಹಕ 35 ಲಕ್ಷ ರೂ. ಮುಂಗಡ ಹಣ ಪಾವತಿಸಿದ್ದರು. ಆದರೆ ಬಿಲ್ಡರ್ ಕರಾರಿನಂತೆ ನಿಗದಿತ ಅವಧಿಯಲ್ಲಿ ಲೇಔಟ್ ಮಾಡಿ ಾರ್ಮ ಹೌಸ್ ಖರೀದಿಗೆ ಕೊಟ್ಟಿರಲಿಲ್ಲ. ಇದರಿಂದ ಸೇವಾ ನ್ಯೂನತೆ ಆಗಿದೆ ಎಂದು ಹೆರಾಲ್ಡ್ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ಬಿಲ್ಡರ್‌ರಿಂದ ಸೇವಾನ್ಯೂನತೆ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೆರಾಲ್ಡ್ ನೀಡಿದ್ದ 35 ಲಕ್ಷ ರೂ. ಸಂದಾಯವಾಗುವವರೆಗೆ 2021ರ ಜ. 25ರಿಂದ ಶೇ. 8ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ಪಾವತಿಸಬೇಕು. ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ 50,000 ರೂ. ಪರಿಹಾರ ಹಾಗೂ ಪ್ರಕರಣದ ಖರ್ಚು 10,000 ರೂ. ನೀಡಬೇಕು ಎಂದು ಆದೇಶಿಸಿದೆ.